More

    ಚಂದ್ರಯಾನ-3 ಯಶಸ್ಸಿಗೆ ಪ್ರಜ್ವಲಿಸಿದ ಅಖಂಡ ಜ್ಯೋತಿ

    ಕುಮಟಾ: ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಶುಕ್ರವಾರ ಇಸ್ರೋದಿಂದ ನಡೆದ ಬಹುಪಯೋಗಿ ಉಪಗ್ರಹ ಚಂದ್ರಯಾನ-3 ಉಡಾವಣೆಯ ಯಶಸ್ಸಿಗಾಗಿ ಪಟ್ಟಣದ ರಥಬೀದಿಯ ಶ್ರೀ ವೆಂಕಟರಮಣ ಮಂದಿರದಲ್ಲಿ ಆಡಳಿತ ಮಂಡಳಿಯಿಂದ ವಿಶೇಷ ಸೇವೆ ನಡೆಯಿತು.

    ಚಂದ್ರಯಾನ-3 ಮಧ್ಯಾಹ್ನ 2.35ರ ರೋಹಿಣಿ ನಕ್ಷತ್ರದ ಮೂಹೂರ್ತದಲ್ಲಿ ನಡೆದು ಯಶಸ್ವಿ ಉಡಾವಣೆ ಹಾಗೂ ವಿಜ್ಞಾನಿಗಳ ಉದ್ದೇಶ ಸಾಫಲ್ಯತೆಯ ಕುರಿತು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ಶ್ರೀಮುಖ್ಯಪ್ರಾಣ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಸನ್ನಿಧಾನದಲ್ಲಿ ಫಲ-ತಾಂಬೂಲ ಸಮರ್ಪಣೆ ಮಾಡಿ, ಅಖಂಡ ಜ್ಯೋತಿ ಪ್ರಜ್ವಲಿಸಿದರು. ಸಮಾಜದ ಹತ್ತುಸಮಸ್ತರ ವತಿಯಿಂದ ಉಡಾವಣೆಯ ಯಶಸ್ಸಿಗಾಗಿ ಹಾಗೂ ಲೋಕಕಲ್ಯಾಣಾರ್ಥ ಶ್ರೀಹರಿ-ಗುರುಗಳಲ್ಲಿ ಪ್ರಾರ್ಥಿಸಲಾಯಿತು.

    ಈ ವೇಳೆ ಶ್ರೀ ವೆಂಟಕರಮಣ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀದಾಸ ನಾಯಕ, ಕಮಲಾಕರ ಬಾಳೇರಿ, ಅಜಿತ್ ಶಾನಭಾಗ, ಅಶೋಕ ಶಾನಭಾಗ ಬಲಮುರಿ, ತ್ರಿವಿಕ್ರಮ ಮಾರುತಿ ಶಾನಭಾಗ, ಅಶೋಕ ವೈ. ಪ್ರಭು, ರಾಮನಾಥ ಶಾನಭಾಗ ಹೆಗಡೆಕರ, ದಾಸ ಶಾನಭಾಗ ಚಿತ್ರಿಗಿ, ಉಪೇಂದ್ರ ಹೆಗಡೆ ಇತರರಿದ್ದರು. ಅರ್ಚಕ ವೇ. ವಾಸುದೇವ ಭಟ್, ವೇ. ಶಶಿಕಾಂತ ಭಟ್ ದೇವತಾ ಪ್ರಾರ್ಥನೆಯೊಂದಿಗೆ ಪೂಜಾ ಕೈಂಕರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts