More

  ಶಂಭುಲಿಂಗ ಶ್ರೀಗಳ ಮೂರ್ತಿ ಮೆರವಣಿಗೆ

  ವಿಜಯವಾಣಿ ಸುದ್ದಿಜಾಲ ನರಗುಂದ

  ಪುಣ್ಯಾರಣ್ಯ ಪತ್ರಿವನಮಠದ ಲಿ. ಶಂಭುಲಿಂಗ ಮಹಾಸ್ವಾಮೀಜಿ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪುಣ್ಯಾರಾಧನೆ ನಿಮಿತ್ತ ಮಠದಲ್ಲಿ ಹಮ್ಮಿಕೊಂಡಿದ್ದ ಚಂಡಿಕಾ ಹೋಮದ ಕಾರ್ಯಕ್ರಮಗಳು ಶುಕ್ರವಾರ ಸಕಲ ಸದ್ಭಕ್ತರು ಹಾಗೂ ವಿವಿಧ ಶ್ರೀಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿದವು.

  ಪಟ್ಟಣದ ಬಸವೇಶ್ವರ ವರ್ತಲದಿಂದ ಪತ್ರಿವನ ಮಠದವರೆಗೆ ಲಿ. ಶಂಭುಲಿಂಗ ಶ್ರೀಗಳ ನೂತನ ಮೂರ್ತಿ ಮೆರವಣೆಗೆ ಸಿದ್ಧವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿವಿಧ ವಾಧ್ಯಮೇಳ ಹಾಗೂ ಮುತ್ತೈದೆಯರ ಕುಂಭ ಮೇಳದೊಂದಿಗೆ ಅದ್ದೂರಿಯಾಗಿ ಜರುಗಿತು.

  ಚಿಕ್ಕುಂಬಿ ನಾಗಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಠದ ಬಳಿಯ ಪಾದಗಟ್ಟೆ ಹತ್ತಿರ ವಿವಿಧ ಪೂಜೆ, ಪುನಸ್ಕಾರ ನೆರವೇರಿಸುವ ಮೂಲಕ ಲಿ. ಶಂಭುಲಿಂಗ ಶ್ರೀಗಳ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

  ಶಂಕರಾಚಾರ್ಯ ಗುರುನಾಥ ಆಚಾರ್ಯರ ಪೌರೋಹಿತ್ಯದಲ್ಲಿ ಮೂರು ಗಂಟೆ ಕಾಲ ಚಂಡಿಕಾ ಹೋಮ ನಡೆಯಿತು. ತಾಲೂಕಿನ ಕುರ್ಲಗೇರಿ ಗ್ರಾಮದ ಸದ್ಭಕ್ತರು ಧಾರ್ವಿುಕ ಕಾರ್ಯಕ್ರಮಕ್ಕೆ ಆಗಮಿಸಿದ್ದ 5 ಸಾವಿರ ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಪತ್ರಿವನಮಠದ ಪೀಠಾಧಿಪತಿ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಮುಗಳಖೋಡ ದಾಸೋಹ ಮಠದ ಮಹದೇವ ಸ್ವಾಮೀಜಿ, ನಿವೃತ್ತ ವಲಯ ಅರಣ್ಯಾಧಿಕಾರಿ ಪಿ.ಸಿ. ಹಿರೇಮನಿ, ಬೆನಕನಕೊಪ್ಪದ ಶಿವಾನಂದ ಸ್ವಾಮೀಜಿ, ಬಸಯ್ಯ ಸ್ವಾಮೀಜಿ, ಸಂಜೀವಕುಮಾರ ಹಿರೇಮನಿ, ಧಾರವಾಡದ ಚಂದ್ರಶೇಖರ ಸ್ವಾಮೀಜಿ, ಶಂಕ್ರಣ್ಣ ಇಂಗಳಳ್ಳಿ, ಕರಡಿಗುಡ್ಡ, ಪಾಲ್ಗುಣಿ ಹಿರೇಮನಿ, ಆನಂದ ನಂದಿಕೋಲಮಠ, ಯಲ್ಲಣ್ಣ ಬೆಳಗಾವಿ, ಆನಂದ ವಡವಡಗಿ, ತಿಮ್ಮಣ್ಣ ಆನೇಗುಂದಿ, ಇತರರು ಉಪಸ್ಥಿತರಿದ್ದರು.

  120 ಕೆಜಿ ಹೋಳಿಗೆ ವಿತರಣೆ: ನರಗುಂದ: ಪತ್ರಿವನಮಠದ ಲಿ. ಶ್ರೀಗುರು ಶಿವಯ್ಯಜ್ಜ ಹಾಗೂ ಶಂಭುಲಿಂಗ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ ಮಠದ ಆವರಣದಲ್ಲಿ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿಗಳಿಂದ ದೇವಿ ಪುರಾಣ ಪಾರಾಯಣ ಹಾಗೂ ಲಿಂಗಧೀಕ್ಷೆ ಕಾರ್ಯಕ್ರಮ ಶುಕ್ರವಾರ ಜರುಗಿದವು.

  ತಾಲೂಕಿನ ಕುರ್ಲಗೇರಿ ಗ್ರಾಮದ 150ಕ್ಕೂ ಅಧಿಕ ಮಹಿಳಾ ಭಕ್ತರು 120 ಕೆಜಿ ಹೋಳಿಗೆ ತಯಾರಿಸಿ ಮಠದ ಧಾರ್ವಿುಕ ಕಾರ್ಯಕ್ರಮಕ್ಕೆ ಆಗಮಿಸಿದ ಸದ್ಭಕ್ತರಿಗೆ ಉಣಬಡಿಸಿದರು.

  ಕುರ್ಲಗೇರಿಯ ಪಾರವ್ವ ಹೂಗಾರ, ಶಾಂತವ್ವ ಚೆಲುವಣ್ಣವರ, ದ್ಯಾವಕ್ಕ ಚೆಲುವಣ್ಣವರ, ಅಜ್ಜವ್ವ ಚೆಲುವಣ್ಣವರ, ಹಾಲವ್ವ ಬೂದಿಹಾಳ, ಕಸ್ತೂರಿ ಚಲವಾದಿ, ರುದ್ರವ್ವ ಬ್ಯಾಹಟ್ಟಿ, ಶಂಕ್ರವ್ವ ಕರಮನಿ, ಇತರರು ಹೋಳಿಗೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts