More

    ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ

    ಕುಂದಗೋಳ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹಿಂಗಾರು ಹಂಗಾಮಿನ ಕಡಲೆಕಾಳು ಖರೀದಿ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಸೋಮವಾರ ಆರಂಭವಾಗಿದೆ.

    ಪ್ರತಿ ಕ್ವಿಂಟಾಲ್​ಗೆ 4875 ರೂ. ದರದಲ್ಲಿ ಒಬ್ಬ ರೈತರಿಂದ ಎಕರೆಗೆ 3 ಕ್ವಿಂಟಾಲ್​ನಂತೆ ಗರಿಷ್ಠ 10 ಕ್ವಿಂಟಾಲ್ ಕಡಲೆ ಕಾಳು ಖರೀದಿಸಲಾಗುತ್ತಿದೆ. ಈಗಾಗಲೆ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿದ ರೈತರಿಗೆ ಫೋನ್ ಕರೆ ಮೂಲಕ ಕಡಲೆ ಕಾಳುಗಳನ್ನು ಮಾರಾಟಕ್ಕೆ ತರುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಪ್ರಕಾರ ಕುಂದಗೋಳ, ಯಲಿವಾಳ, ಯರಗುಪ್ಪಿ ಕೇಂದ್ರಗಳಲ್ಲಿ ದಿನಕ್ಕೆ 25 ರೈತರಿಂದ ಕಡಲೆ ಖರೀದಿಸಲಾಗುತ್ತದೆ.

    ಕುಂದಗೋಳ ತಾಲೂಕಿನ ಯರಗುಪ್ಪಿ ಕೇಂದ್ರದಲ್ಲಿ 919, ಕುಂದಗೋಳದಲ್ಲಿ 1190, ಯಲಿವಾಳದಲ್ಲಿ 450 ಅರ್ಜಿಗಳು ಸ್ವೀಕಾರವಾಗಿವೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡಲೆಕಾಳು ಖರೀದಿಸಲಾಗಿದೆ. ಏಪ್ರಿಲ್ 24ರವರೆಗೆ ಅರ್ಜಿ ಸಲ್ಲಿಸಿದ ಎಲ್ಲ ರೈತರಿಂದ ಕಡಲೆ ಕಾಳು ಖರೀದಿಸಲಾಗುವುದು ಎಂದು ಯರಗುಪ್ಪಿ ಕೃಷಿ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಮಹಾಂತ ಒಡೆಯರ್ ಹೇಳಿದರು.

    ಅಣ್ಣಿಗೇರಿಯಲ್ಲಿ ಇಂದು: ಹಮಾಲರು ಇಲ್ಲದ ಕಾರಣ ಅಣ್ಣಿಗೇರಿಯಲ್ಲಿ ಮಾ. 17ರಿಂದ ಕಡಲೆ ಖರೀದಿ ಆರಂಭಿಸಲಾಗುವುದು ಎಂದು ಎಪಿಎಂಸಿ ಕಾರ್ಯರ್ದ ವಿ.ಎಂ. ಮ್ಯಾಗೇರಿ ತಿಳಿಸಿದರು. ನಿನ್ನೆ ರೈತರಿಗೆ ಫೋನ್ ಮಾಡಿ ತಿಳಿಸಿಲ್ಲ. ಅದಕ್ಕಾಗಿ ಇಂದು ರೈತರಿಗೆ ಫೋನ್ ಮಾಡಿ ಮಂಗಳವಾರ ಕಡಲೆ ಖರೀದಿ ಪ್ರಾರಂಭಿಸುವುದಾಗಿ ಅಣ್ಣಿಗೇರಿ ಎಪಿಎಸಿ ಅಧ್ಯಕ್ಷ ಗುರುನಾಥಗೌಡ ಉಳ್ಳೇಗಡ್ಡಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.

    ಕೃಷಿ ಇಲಾಖೆಯಲ್ಲಿ ಮುಂದುವರಿದ ನೋಂದಣಿ: ನವಲಗುಂದ: ಇಲ್ಲಿನ ಅಣ್ಣಿಗೇರಿ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿನ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಸೋಮವಾರ 70 ರೈತರಿಂದ 600 ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ. ಈ ಕೇಂದ್ರದಲ್ಲಿ 2,634 ರೈತರು ಹೆಸರು ನೋಂದಾಯಿಸಿದ್ದಾರೆ. ನೋಂದಣಿ ಅವಧಿ ವಿಸ್ತರಿಸಿದ್ದರಿಂದ ರೈತರು ತಮ್ಮ ಎಫ್​ಐಡಿ ನಂಬರ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ಹೊಲದ ಪಹಣಿ ಪತ್ರಿಕೆಗಳನ್ನು ಕೃಷಿ ಇಲಾಖೆ ಕಚೇರಿಯಲ್ಲಿ ನೀಡಿ ಹೆಸರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

    ಕಡಲೆ ಖರೀದಿ ಕೆಂದ್ರದಲ್ಲಿ ಎಪಿಎಂಸಿ ಅಧಿಕಾರಿಗಳು ರೈತರಿಂದ ಸರ್ಕಾರ ಆದೇಶದಂತೆ 10 ಕ್ವಿಂಟಾಲ್ ಕಡಲೆ ಖರೀದಿಸುತ್ತಿದ್ದಾರೆ. ಎಫ್​ಎಕ್ಯೂ ಗುಣಮಟ್ಟದ ಗಾತ್ರ, ಬಣ್ಣ, ಆಕಾರ ಹೊಂದಿರುವ, ಚೆನ್ನಾಗಿ ಒಣಗಿದ, ಗಟ್ಟಿ ಮತ್ತು ಸ್ವಚ್ಛವಾದ ಕಡಲೆ ಕಾಳುಗಳನ್ನು ಸಾಣಿಗೆಯಲ್ಲಿ ಹಾಕಿ ಸ್ವಚ್ಛಗೊಳಿಸಿ ಖರೀದಿಸುತ್ತಿದ್ದಾರೆ. ಆದರೆ, ಕಡಲೆ ಬೆಳೆದ ಕೆಲವು ರೈತರು ತಮ್ಮ ಪಹಣಿ ಪತ್ರಿಕೆಯಲ್ಲಿ ಜಿಪಿಎಸ್ ಸಮಸ್ಯೆಯಿಂದ ಬೇರೆ ಬೆಳೆ ನಮೂದಾಗಿದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆಲ್ಲ ಗ್ರಾಮ ಮಟ್ಟದ ಅಧಿಕಾರಿಗಳ ಮಾಡಿದ ಎಡವಟ್ಟು ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಕೂಡಲೆ ಈ ಅನ್ಯಾಯವನ್ನು ಸರಿಪಡಿಸಿ ಕಡಲೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಎಪಿಎಂಸಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಪುನಃ ರೈತರ ಹೊಲದ ಬೆಳೆಯನ್ನು ಜಿಪಿಎಸ್, ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಲು ಹರಸಾಹಸ ಮಾಸುತ್ತಿದ್ದಾರೆ.

    ಉಪ್ಪಿನಬೆಟಗೇರಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ 910 ರೈತರ ಪೈಕಿ ಸೋಮವಾರ 70 ರೈತರಿಂದ 700 ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts