More

    ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಚನ್ನಪಟ್ಟಣ: ತಾಲೂಕಿನ ಮಳೂರುಪಟ್ಟಣ ಗ್ರಾಮ ದೇವತೆ ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿಯ ಗೋಪುರ ರಾತ್ರೋರಾತ್ರಿ ಕುಸಿದಿದೆ. ಇದು ಅಪಾಯದ ಮುನ್ಸೂಚನೆಯೇ ಎಂಬ ಆತಂಕ ಕೆಲ ಸ್ಥಳೀಯರಲ್ಲಿ ಮನೆ ಮಾಡಿದೆ.

    ರಾಮನಗರ ಜಿಲ್ಲೆಯ ಮಳೂರುಪಟ್ಟಣದ ಚಾಮುಂಡೇಶ್ವರಿ ದೇವಾಲಯದ 21 ಅಡಿ ಎತ್ತರದ ಗೋಪುರ ಬುಧವಾರ ರಾತ್ರಿ ಕುಸಿದು ಬಿದಿದೆ. ಅದೃಷ್ಟವಶಾತ್ ದೇವಾಲಯದಲ್ಲಿ ಯಾರೂ ಇಲ್ಲದಿದ್ದಾಗ ಅವಘಡ ಸಂಭವಿಸಿದ್ದು, ಭಾರೀ ದುರಂತವೊಂದು ತಪ್ಪಿದೆ.

    ಇದನ್ನೂ ಓದಿರಿ ಇನ್ನೆರಡು ದಿನದಲ್ಲಿ ಕಲಬುರಗಿ-ಮುಂಬೈ ನಡುವೆ ವಿಮಾನ ಹಾರಾಟ ಶುರು

    ಗ್ರಾಮದ ಪುರಾತನ ದೇವಾಲಯ ಇದ್ದಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದೆ. ದೇವಾಲಯ ಶಿಥಿಲಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚಾಮುಂಡೇಶ್ವರಿ ಜೀರ್ಣೋದ್ಧಾರ ಟ್ರಸ್ಟ್ ರಚಿಸಿಕೊಂಡು ಮೂರು ವರ್ಷಗಳ ಹಿಂದೆ ನೂತನ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದರು. ಭಕ್ತರ ನೆರವಿನೊಂದಿಗೆ ನೂತನ ದೇವಾಲಯದ ಕಾಮಗಾರಿ ಆರಂಭಗೊಂಡು ಪ್ರಗತಿಯಲ್ಲಿತ್ತು. ಬುಧವಾರ ರಾತ್ರಿ ಈ ದೇವಾಲಯದ ಗೋಪುರ ದಿಢೀರನೆ ಕುಸಿದು ಬಿದ್ದಿರುವುದು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಆತಂಕ ಮೂಡಿಸಿದೆ.

    ಇದನ್ನೂ ಓದಿರಿ ಕೆಆರ್​ಎಸ್ ಡ್ಯಾಂ ಬಳಿ ಗುಂಡು-ತುಂಡಿನ ಭರ್ಜರಿ ಪಾರ್ಟಿ… ಕರೊನಾ ಭೀತಿಗೂ ಕ್ಯಾರೆ ಎನ್ನದ ಜನರಿವರು!

    ಕಳಪೆ ಕಾಮಗಾರಿ?: ಮುಜರಾಯಿ ಇಲಾಖೆಗೆ ಈ ದೇವಾಲಯ ಒಳಪಟ್ಟರೂ ಸರ್ಕಾರದ ಯಾವುದೇ ಅನುದಾನ ಬಳಸದೆ ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ 33 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ದೇವಾಲಯ ನಿರ್ಮಾಣದ ಗುತ್ತಿಗೆಯನ್ನು ತಮಿಳುನಾಡು ಮೂಲದ ವ್ಯಕ್ತಿಗೆ ವಹಿಸಲಾಗಿತ್ತು. ಗೋಪುರ ಕುಸಿಯಲು ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

    ಇದನ್ನೂ ಓದಿರಿ ಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?
    ಸರಿಯಾಗಿ ತಳಪಾಯ ಹಾಕದ ಕಾರಣ ಗೋಪುರ ಕುಸಿದು ಬಿದ್ದಿದೆ ಎನ್ನಲಾಗಿದೆ. ಇನ್ನು ಗ್ರಾಮ ದೇವತೆಯ ದೇಗುಲಕ್ಕೆ ವಿಘ್ನ ಎದುರಾಗಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆರ್​ಐ ಲಕ್ಷ್ಮಣ್​ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಇನ್ನು ಗ್ರಾಮ ದೇವತೆಯ ದೇಗುಲಕ್ಕೆ ವಿಘ್ನ ಎದುರಾಗಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿರಿ ಸಕಲೇಶಪುರಕ್ಕೆ ಪ್ರವಾಸಿಗರ ದಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts