More

    ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಷಷ್ಠಿ ಆಚರಣೆ! ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡವರು ನಾಗ ಉತ್ಸವದಲ್ಲಿ ಭಾಗಿ

    ಚಾಮರಾಜನಗರ: ನಾಡಿನಾದ್ಯಂತ ಚಂಪಾ ಷಷ್ಠಿಯನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಷಷ್ಠಿ ಹಬ್ಬದ ದಿನ ಹುತ್ತಕ್ಕೆ ಹಾಲನೆರೆಯುವುದು ಸಾಮಾನ್ಯ ಸಂಪ್ರದಾಯ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಾಲಿನ ಬದಲು ಹುತ್ತಕ್ಕೆ ಕೋಳಿಯ ರಕ್ತ ಎರೆಯಲಾಯಿತು. ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡವರು ನಾಗ ಉತ್ಸವದಲ್ಲಿ ಪಾಲ್ಗೊಂಡದ್ದು ಮತ್ತೊಂದು ವಿಶೇಷ.

    ಚಾಮರಾಜನಗರ, ಮಲ್ಲಯ್ಯನಪುರ, ಶಿವಪುರ, ಉತ್ತುವಳ್ಳಿ, ಕೊಳ್ಳೇಗಾಲ ಭಾಗಗಳಲ್ಲಿ ಹುತ್ತಕ್ಕೆ ಹಾಲಿನ ಬದಲು ಕೋಳಿ ರಕ್ತ ಎರೆಯಲಾಯಿತು. ಕೋಳಿಯ ತಲೆ, ಮೊಟ್ಟೆ ಮತ್ತು ಬಾಳೆಹಣ್ಣನ್ನು ಹುತ್ತದ ಮುಂದೆ ಇಟ್ಟು ನಾಗಪೂಜೆ ಸಲ್ಲಿಸಲಾಯಿತು. ಹೀಗೆ ಮಾಡಿದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರದ್ದು. ಹುತ್ತದ ಬಳಿ ಕೋಳಿ ಕೊಯ್ದು, ಮನೆಯಲ್ಲಿ ಅಡುಗೆ ಮಾಡಿ ಸಂಬಂಧಿಕರನ್ನು ಕರೆದು ಊಟ ಹಾಕುವ ಪದ್ಧತಿ ಇಲ್ಲಿ ರೂಢಿಯಲ್ಲಿದೆ.

    ಮಹದೇಶ್ವರ ಬೆಟ್ಟದಲ್ಲಿ ನಾಗ ಉತ್ಸವ: ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡವರು ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ನಾಗ ಉತ್ಸವದಲ್ಲಿ ಪಾಲ್ಗೊಂಡರು. ಮಜ್ಜನಬಾವಿಯಿಂದ ಬೆಳಗ್ಗೆ ನೀರು ತಂದು ನಾಗದೇವತೆಗೆ ಅಭಿಷೇಕ, ಮಹಾಮಂಗಳಾರತಿ ಮಾಡಿದರು. ರಾತ್ರಿ ಏಳು ಹೆಡೆಯ ಸರ್ಪ ಮತ್ತು ಮಲೆ ಮಹದೇಶ್ವರರ ಉತ್ಸವ ಮೂತಿರ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಧೂಪ, ದೀಪ, ಕರಿಬಳೆ, ಕರಿಮಣಿ ಇಟ್ಟು ಪೂಜೆ ಸಲ್ಲಿಸಿದರು. ಕನಸಿನಲ್ಲಿ ಆಗಾಗ್ಗೆ ಹಾವು ಕಾಣಿಸಿಕೊಂಡು ಭೀತಿಗೊಳಗಾಗಿದ್ದವರು ನಾಗಮಲೆಗೆ ಹೋಗಿ ಸ್ವಾಮಿಗೆ ನಾಗ ಉಂಗುರ ಸಮರ್ಪಿಸಿದರು.

    ಸಾಮಾನ್ಯವಾಗಿ ಮಲೆ ಮಹದೇಶ್ವರರಿಗೆ ಹುಲಿ, ಬಸವ ವಾಹನಗಳಲ್ಲಿ ಉತ್ಸವ ನಡೆಸಲಾಗುತ್ತದೆ. ಷಷ್ಠಿ ಹಬ್ಬದ ದಿನ ಮಾತ್ರ ಏಳು ತಲೆಯ ಸರ್ಪದ ಉತ್ಸವ ನಡೆಯುವುದರಿಂದ ಈ ಹಬ್ಬ ಬೆಟ್ಟದಲ್ಲಿ ವಿಶೇಷ ಎನಿಸಿದೆ. ಹಾವು ಕಚ್ಚಿದವರಿಗೆ ನಾಟಿ ಔಷಧ ನೀಡುವ ಕಾಡೊಲ ಗ್ರಾಮದ ಪುಟ್ಟ ತಮ್ಮಡಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು. ಹಾವು ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆದಿದ್ದಕ್ಕೆ ಇವರಿಗೆ ನೀಡಿರುವ ಕಾಣಿಕೆಯನ್ನು ಕೂಡಿಟ್ಟು ಪಷ್ಠಿ ದಿನ ಪ್ರಸಾದ ವಿತರಣೆ ಮಾಡುವುದನ್ನು ಪುಟ್ಟ ತಮ್ಮಡಿ ಕುಟುಂಬ ತಲೆಮಾರುಗಳಿಂದ ಮಾಡುತ್ತಿರುವುದು ಬಹಳ ವಿಶೇಷ.

    ಮಕ್ಕಳ ಸ್ಕೂಲ್ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್‌, ವೈಟ್‌ನರ್‌ ಪತ್ತೆ! ಬೆಂಗಳೂರಲ್ಲಿ ಆಘಾತಕಾರಿ ಪ್ರಕರಣ ಬಯಲು

    3 ಕಡೆ ಮನೆ ಬಾಡಿಗೆ ಪಡೆದು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಸುಂದರಿ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಇವರ ಹಿಸ್ಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts