More

    ಹರದನಹಳ್ಳಿಯಲ್ಲಿ ಗೌರಿ-ಗಣೇಶ ವಿಸರ್ಜನೆ

    ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀವಿನಾಯಕ ಭಕ್ತ ಮಂಡಳಿ ಹಾಗೂ ಮೈಸೂರಿನ ಪರ್ಫೆಂಕ್ಟ್ ವೆಂಚರ್ ಸಹಕಾರದಲ್ಲಿ ಗೌರಿ-ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು.

    ಗ್ರಾಮದ ಶ್ರೀವೇಣುಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅಲಂಕೃತ ಟ್ರಾಕ್ಟರ್‌ನಲ್ಲಿ ಗೌರಿ-ಗಣೇಶ್ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ, ಈಡುಗಾಯಿ ಒಡೆಯುವ ಮೂಲಕ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ, ನಾಯಕರ ಬೀದಿಯಲ್ಲಿರುವ ಪುಷ್ಕರಣಿಯಲ್ಲಿ ಬಾಣ ಬಿರುಸುಗಳೊಂದಿಗೆ ಗೌರಿ-ಗಣೇಶಮೂರ್ತಿ ವಿಸರ್ಜನೆ ನೆರವೇರಿಸಲಾಯಿತು.

    ಈ ಸಂದರ್ಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಭಾರತೀಯ ಸಂಪ್ರದಾಯದಲ್ಲಿ ಗಣೇಶನ ಪೂಜೆಗೆ ಹೆಚ್ಚಿನ ಮಹತ್ವ ಇದೆ. ಭಾರತೀಯ ದೇವರುಗಳಲ್ಲಿ ಅತ್ಯಂತ ಮಂಗಳಕರ ದೇವನೆಂದು ಗಣೇಶನನ್ನು ಪರಿಗಣಿಸಲಾಗಿದ್ದು, ಗಣೇಶನ ಪೂಜೆಗೆ ವಿಶೇಷವಾಗಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಹಿಂದೂಧರ್ಮದಲ್ಲಿ ಗಣಪತಿಯು ವಿಘ್ನ ನಿವಾರಕರಾಗಿದ್ದು, ಯಾವುದೇ ಶುಭ ಕಾರ್ಯದ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ ಎಂದರು.

    ಶ್ರೀಗೌರಿ-ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಂದಿಧ್ವಜ ಕುಣಿತ, ವೀರಗಾಸೆ, ವಾದ್ಯ, ಬ್ಯಾಂಡ್‌ಸೆಟ್, ಹುಲಿವೇಷಧಾರಿ ಹಾಗೂ ಈಶ್ವರ ವೇಷಧಾರಿ ನೃತ್ಯ ಗಮನ ಸೆಳೆಯಿತು.

    ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಿ.ಪಂ.ಮಾಜಿ ಸದಸ್ಯ ರಮೇಶ್, ತಾ.ಪಂ.ಮಾಜಿ ಸದಸ್ಯ ಮಹದೇವಶೆಟ್ಟಿ, ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್, ಪೂರ್ವ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶ್ರೀಕಾಂತ್, ಗ್ರಾ.ಪಂ.ಮಾಜಿ ಸದಸ್ಯ ಬಿ.ಕುಮಾರ್, ಶ್ರೀವಿನಾಯಕ ಭಕ್ತಮಂಡಳಿ ಪದಾಧಿಕಾರಿಗಳು, ಗ್ರಾಮದ ಎಲ್ಲಾ ಕೋಮಿನ ಯಜಮಾನರುಗಳು, ಮುಖಂಡರುಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts