More

    ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಸ್ಪಂದನೆ

    ಕೊಳ್ಳೇಗಾಲ: ಪಟ್ಟಣದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ಉಚಿತ ಹೇರ್ ಕಲರಿಂಗ್ ಮಾಡುವ ಗಾರ್ನಿಯರ್ ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭಿಸಿದೆ.

    ಪಟ್ಟಣದ ಟಿಎಪಿಸಿಎಎಸ್ ರಸ್ತೆಯಲ್ಲಿರುವ ಸಾರ್ವಜನಿಕ ಬಾಲಕ ವಿದ್ಯಾರ್ಥಿ ನಿಲಯದ ಸಮೀಪದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಮಹಿಳೆಯರು, ಪುರುಷರು, ಯುವಕ-ಯುವತಿಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಿಚ್ಛೆಯ ಬಣ್ಣಗಳನ್ನು ಹಾಕಿಸಿಕೊಂಡು ಖುಷಿಪಟ್ಟರು.

    ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ರೂಪಾ ತೋಟೇಶ್, ಅಕ್ಕನ ಬಳಗದ ಅಧ್ಯಕ್ಷೆ ಪುಷ್ಪಾ ಶಾಂತಮಲ್ಲಪ್ಪ ಹಾಗೂ ಮಹಿಳೆ ಸಂಘಟನೆಯ ಮಮತಾ ಬದ್ರಿನಾಥ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕದಳಿ ವೇದಿಕೆ ಕಾರ್ಯದರ್ಶಿ ಗೀತಾ ಮಂಜುನಾಥ್, ಸದಸ್ಯರಾದ ಅನುಪಮಾ, ರಮ್ಯಾ ಮಹೇಶ್, ಸವಿತಾ ಲೋಕೇಶ್, ರಾಣಿ ನಾಗಣ್ಣ, ಕೋಮಲಾ ಸುರೇಶ್, ಅಂಬಿಕಾ ಗಿರೀಶ್, ಮೇನಕಾ ಇತರರು ಇದ್ದರು. ಈ ಉಚಿತ ಅಭಿಯಾನ ಮಂಗಳವಾರ ಹಾಗೂ ಬುಧವಾರವೂ ಇರಲಿದ್ದು, ಆಸಕ್ತ ಸಂಘ, ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಚಿತವಾಗಿ ಪ್ರಯೋಜನ ಪಡೆದುಕೊಳ್ಳಬಹುದು.

    ಉಚಿತ ಹೇರ್ ಕಲರಿಂಗ್ ಅಭಿಯಾನ ಉತ್ತಮ ಕಾರ್ಯಕ್ರಮವಾಗಿದೆ. ಈ ಅಭಿಯಾನ ಮಹಿಳೆಯರಿಗೆ ಹತ್ತಿರವಾಗಿತ್ತು. ಬಹಳ ಖುಷಿಯಿಂದ ಹೇರ್ ಕಲರಿಂಗ್ ಮಾಡಿಸಿಕೊಂಡರು. ವಿಜಯವಾಣಿ ಪತ್ರಿಕೆ ಹಾಗೂ ಗಾರ್ನಿಯರ್ ಕಂಪನಿಗೆ ಧನ್ಯವಾದ ತಿಳಿಸುತ್ತೇನೆ. ಮಮತಾ ಬದ್ರಿನಾಥ್, ಆರ್ಯ ವೈಶ್ಯ ಮಹಿಳಾ ಸಂಘಟನೆ ಮುಖಂಡರು, ಕೊಳ್ಳೇಗಾಲ.

    ಅಭಿಯಾನದಲ್ಲಿ ಭಾಗವಹಿಸಿ ಮಹಿಳೆಯರು ಹೇರ್ ಕಲರಿಂಗ್ ಮಾಡಿಸಿಕೊಂಡು ಸಂತಸಪಟ್ಟರು. ಮಹಿಳೆಯರನ್ನು ಒಳಗೊಳ್ಳುವ ಇಂತಹ ಕಾರ್ಯಕ್ರಮ ಹೆಚ್ಚಾಗಬೇಕು. ಕಾರ್ಯಕ್ರಮ ಆಯೋಜಕರಿಗೆ ಧನ್ಯವಾದಗಳು.
    ಪುಷ್ಪಾ ಶಾಂತಮಲ್ಲಪ್ಪ, ಅಕ್ಕನ ಬಳಗ ಅಧ್ಯಕ್ಷೆ

    ಸಾರ್ವಜನಿಕರಿಗೆ ಉಪಯೋಗುವ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮ ವ್ಯವಸ್ಥಿತವಾಗಿ ರೂಪಿಸಲಾಗಿತ್ತು. ಪುರುಷ, ಮಹಿಳೆಯರು ಪ್ರತ್ಯೇಕ ಪರಿಣಿತರು ವಿವಿಧ ವಿನ್ಯಾಸದ ಹೇರ್ ಕಲರಿಂಗ್ ಮಾಡಿ ಎಲ್ಲರನ್ನು ಖುಷಿಪಡಿಸಿದರು.
    ರೂಪಾ ತೋಟೇಶ್, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts