More

    ಬಸವಣ್ಣ ಮನುಕುಲ ಕಂಡ ಮಹಾ ಚೇತನ

    ಯಳಂದೂರು : ಕಾಯಕಯೋಗಿ ಬಸವಣ್ಣ ಮಾನವತಾವಾದಿ, ಮನುಕುಲ ಕಂಡ ಮಹಾ ಚೇತನ ಎಂದು ಗ್ರಾಮದ ನಾಡಗೌಡ ಮಹಾದೇವಪ್ಪ ಬಣ್ಣಿಸಿದರು.

    ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಭಾನುವಾರ ಸಂಜೆ ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದ ಮಹಾಪುರುಷ ಬಸವೇಶ್ವರರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಅವರ ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಕ್ರಾಂತಿ ಇಡೀ ಜಗತ್ತಿಗೆ ಆದರ್ಶಪ್ರಾಯ ಎಂದರು.

    ಗ್ರಾಮ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಬಸವೇಶ್ವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಗೌಡರ ನಟರಾಜಪ್ಪ, ಗ್ರಾಪಂ ಸದಸ್ಯ ಕೆ.ಬಿ.ಮಲ್ಲಣ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಕುಮಾರ್ ಹಾಗೂ ಬಸವ ಸಂಘದ ಯುವಕರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts