More

    ಕ್ರಿಸ್ತರಾಜ ಕಾಲೇಜಿಗೆ ಶೇ.97.18 ಫಲಿತಾಂಶ

    ಹನೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಕ್ರಿಸ್ತರಾಜ ಪದವಿ ಪೂರ್ವ ಕಾಲೇಜು 97.18 ಫಲಿತಾಂಶ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.

    ಕಾಲೇಜಿನ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಿಂದ 142 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 138 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 52 ವಿದ್ಯಾರ್ಥಿಗಳು ಅತ್ಯುತ್ತಮ, 79 ಪ್ರಥಮ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ 55 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರಲ್ಲಿ ಸಿ.ಅನು 600ಕ್ಕೆ 564, ಸಿ.ಎಸ್ ಲಿಖಿತಾ 558, ಎಂ. ಮಹೇಶ್ವರಿ ಹಾಗೂ ಎಸ್.ಜೀವಿತಾ 552 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 87 ವಿದ್ಯಾರ್ಥಿಗಳ ಪೈಕಿ 84 ವಿದ್ಯಾರ್ಥಿಗಳು ಪಾಸಾಗಿದ್ದು, ಶಶಾಂಕ್ 600ಕ್ಕೆ 584 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಎನಿಸಿದ್ದಾನೆ. ವೀರೇಶ್ 574 ಹಾಗೂ ಎಂ. ದಿವ್ಯಾ 570 ಅಂಕ ಗಳಿಸಿದ್ದಾರೆ.

    ಎಂ. ಮಹೇಶ್ವರಿ ಹೇಮಾ, ನಾಗವಲ್ಲಿ ಸಹನಾ, ವಸಂತಿ ಹಾಗೂ ಪಿ.ಮಲ್ಲೇಶ್ ಕನ್ನಡ ಭಾಷಾ ವಿಷಯದಲ್ಲಿ 100ಕ್ಕೆ 100 ಅಂಕ ಹಾಗೂ ಅರ್ಥಶಾಸ್ತ್ರದಲ್ಲಿ ವೀರೇಶ್ 100ಕ್ಕೆ 100 ಅಂಕ ಗಳಿಸಿದ್ದಾನೆ. ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ರೋಷನ್, ಪ್ರಾಂಶುಪಾಲೆ ಸಿಸ್ಟರ್ ಜಾನ್‌ಶಾಂತಿ ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts