More

    ರಕ್ತಹೀನತೆಯಿಂದ ಬಳಲುವವರಿಗೆ ನೆರವಾಗಿ

    ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಸಲಹೆ

    ಚಾಮರಾಜನಗರ: ರಕ್ತದಾನ ಮಾಡುವ ಮೂಲಕ ರಕ್ತ ಹೀನತೆಯಿಂದ ಬಳಲುವ ರೋಗಿಗಳಿಗೆ ಸಾರ್ವಜನಿಕರು ನೆರವಾಗಬೇಕು ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಹೇಳಿದರು.
    ಕರೊನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಲು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಕ್ತ ನಿಧಿ ಕೇಂದ್ರ ಹಾಗೂ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ವಿರಕ್ತ ಮಠದ ಅಭಿಮಾನಿ ಬಳಗ ವತಿಯಿಂದ ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಹಲವಾರು ಜನ ಕರೊನಾ ಭಯದಿಂದ ರಕ್ತದಾನ ಮಾಡಲು ಮುಂದಾಗುತ್ತಿಲ್ಲ. ಇಂತಹ ಭಯದ ವಾತಾವರಣವನ್ನು ಹೋಗಲಾಡಿಸಲು ಶಿಬಿರಗಳು ಅತ್ಯಗತ್ಯ ಎಂದು ತಿಳಿಸಿದರು.
    ಜಿಲ್ಲೆಯನ್ನು ಕರೊನಾ ಮುಕ್ತವಾಗಿಸಿ, ಹಸಿರುವಲಯವನ್ನಾಗಿ ಮಾಡಲು ಹೋರಾಡಿದ ಕರೊನಾ ವಾರಿಯರ್ಸ್‌ಗೆ ಅಭಿನಂದನೆ ತಿಳಿಸಿದರು. ಶಿಬಿರದಲ್ಲಿ 52 ಜನರು ರಕ್ತದಾನ ಮಾಡಿದರು.

    ಎಸ್ಪಿ ಎಚ್.ಡಿ.ಆನಂದ್ ಕುಮಾರ್, ವಿರಕ್ತ ಮಠದ ಚೆನ್ನಬಸವ ಸ್ವಾಮೀಜಿ , ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಡೀನ್ ಡಾ.ಸಂಜೀವ್. ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್, ರಕ್ತನಿಧಿ ವೈದ್ಯಾಧಿಕಾರಿ ಡಾ.ಸುಜಾತಾ, ಅರವಳಿಕೆ ತಜ್ಞ ಡಾ.ಮಹೇಶ್, ಚಂದನ್, ಮುಖಂಡರಾದ ವೃಷಬೇಂದ್ರಪ್ಪ, ನಾಗಶ್ರೀ ಪ್ರತಾಪ್, ಮಲ್ಲಿಕಾರ್ಜುನಪ್ಪ ಇತರರು ಉಪಸ್ಥಿತರಿದ್ದರು.ೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts