ಆರೋಗ್ಯ ಜಾಗೃತಿ ಅವಶ್ಯ

blank

ಚಳ್ಳಕೆರೆ: ಪ್ರಸ್ತುತ ಒತ್ತಡ ಪರಿಸ್ಥಿತಿಯಲ್ಲಿ ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಗರಸಭೆ ಸದಸ್ಯ ಎಂ.ಜೆ.ರಾಘವೇಂದ್ರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ಸಾರ್ವಜನಿಕ ಆಸ್ಪತ್ರೆಯಿಂದ ಇಲ್ಲಿನ ಅಂಬೇಡ್ಕರ್ ನಗರ ಉರ್ದು ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿಕೊಂಡು ಗುಣಮುಖರಾಗಬೇಕಾಗಿದೆ. ಸಣ್ಣ ಸಮಸ್ಯೆಯನ್ನು ಆರಂಭದಲ್ಲಿ ನಿರ್ಲಕ್ಷ ಮಾಡದೆ ಜಾಗೃತರಾಗಬೇಕು ಎಂದು ಹೇಳಿದರು.

ಶಿಬಿರದಲ್ಲಿ 200 ಜನರಿಗೆ ತಪಾಸಣೆ ನಡೆಸಿ ಔಷಧ ವಿತರಣೆ ಮಾಡಲಾಯಿತು. ನಗರಸಭೆ ಸದಸ್ಯರಾದ ಸುಮಕ್ಕ ಅಂಜಿನಪ್ಪ, ಪ್ರಶಾಂತಕುಮಾರ್, ಟಿಎಚ್‌ಒ ಡಾ.ಎನ್.ಪ್ರೇಮಸುಧಾ, ಡಾ.ಸತೀಶ ಆದಿಮನಿ, ಡಾ.ಬಾಸೀರಾ, ಡಾ.ಪ್ರದೀಪ್ ಇದ್ದರು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…