More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸಲ್ಲ

    ಚಳ್ಳಕೆರೆ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಸರ್ಕಾರದ ನಿರ್ಧಾರದಿಂದ ಸಣ್ಣ ಮತ್ತು ಮಧ್ಯಮ ವರ್ಗದ ಬಡ ರೈತರ ಬದುಕು ಸಂಪೂರ್ಣ ನಿರ್ನಾಮವಾಗಲಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

    ಕಾಯ್ದೆ ಜಾರಿಯಾದ ತಕ್ಷಣವೇ ಸಾಲ ಇತರೆ ಸಮಸ್ಯೆಗೆ ಸಿಲುಕಿರುವ ರೈತರು ಬಂಡವಾಳಶಾಹಿಗಳ ಅಧಿಕ ಮೊತ್ತದ ಬೆಲೆಗೆ ತನ್ನ ಕೈಯಲ್ಲಿರುವ ತುಂಡು ಭೂಮಿಗಳನ್ನು ಕೂಡಲೇ ಕಳೆದುಕೊಳ್ಳಲಿದ್ದಾನೆ ಎಂದು ತಿಳಿಸಿದ್ದಾರೆ.

    ಕೈಗೆ ಬಂದ ಹಣದಲ್ಲಿ ಒಂದಿಷ್ಟು ಮನೆ ಕಟ್ಟಿಕೊಂಡು ಉಳಿದ ಹಣಕ್ಕೆ ಹಬ್ಬ-ಜಾತ್ರೆ ಇತರೆ ದುಂದುವೆಚ್ಚ ಮಾಡಿ ಬರಿಗೈ ಮಾಡಿಕೊಳ್ಳುತ್ತಾನೆ. ಕುಟುಂಬಕ್ಕೆ ಆಧಾರವಾಗಿದ್ದ ಭೂಮಿಯನ್ನು ಕಳೆದುಕೊಂಡ ರೈತರು ಪಟ್ಟಣಕ್ಕೆ ಗುಳೆ ಹೋಗುವುದು ಅನಿವಾರ್ಯ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ಧಾರೆ.

    ಸಣ್ಣಪುಟ್ಟ ರೈತರ ಬದುಕನ್ನು ಬಲಿಕೊಟ್ಟು ಉದ್ದಿಮೆದಾರರು ಮತ್ತು ಹಣವಂತರಿಗೆ ನೆರವು ಮಾಡಲು ಸರ್ಕಾರ ಮುಂದಾಗಿದೆ. ಕೂಡಲೇ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts