More

    ಅಧ್ಯಕ್ಷೆಯಾಗಿ ಚನ್ನಮ್ಮ, ಉಪಾಧ್ಯಕ್ಷೆಯಾಗಿ ಹೇಮಾವತಿ ಆಯ್ಕೆ

    ಚನ್ನಮ್ಮ ಕಿತ್ತೂರು: ಕಿತ್ತೂರು ತಾಲೂಕು ಅಸ್ತಿತ್ವಕ್ಕೆ ಬಂದ ಬಳಿಕ ಕಿತ್ತೂರು ತಾಲೂಕು ಪಂಚಾಯಿತಿ ಪ್ರಥಮ ಅಧ್ಯಕ್ಷೆಯಾಗಿ ಹುಣಸೀಕಟ್ಟಿ ತಾಪಂ ಸದಸ್ಯೆ ಚನ್ನಮ್ಮ ರುದ್ರಪ್ಪ ಹೊಸಮನಿ, ಉಪಾಧ್ಯಕ್ಷೆಯಾಗಿ ದೇಗಾಂವ ತಾಪಂ ಸದಸ್ಯೆ ಹೇಮಾವತಿ ಪರಶುರಾಮ ಬೇಕವಾಡಕರ ಅವರು ಶಾಸಕ ಮಹಾಂತೇಶ ದೊಡಗೌಡರ ನೇತೃತ್ವದಲ್ಲಿ ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಪಕ್ಷದ ನಿರ್ಧಾರಕ್ಕೆ ಎಲ್ಲ ತಾಲೂಕು ಪಂಚಾಯಿತಿ ಸದಸ್ಯರು ಬದ್ಧರಾಗಿದ್ದರು. ಈ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ. ಕಿತ್ತೂರು ತಾಲೂಕನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ತಾಲೂಕು ಪಂಚಾಯಿತಿಗೆ 2 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದರು. ಡಾ. ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಚನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಜಗದೀಶ ವಸ್ತ್ರದ, ಬಸನಗೌಡ ಸಿದ್ರಾಮನಿ, ಶ್ರೀಕರ ಕುಲಕರ್ಣಿ, ಬಸವರಾಜ ಕೊಳದೂರ, ಉಮಾದೇವಿ ಬಿಕ್ಕಣ್ಣವರ, ಉಳವಪ್ಪ ಉಳ್ಳೇಗಡ್ಡಿ, ರಮೇಶ ಉಗರಕೋಡ, ಸರಸ್ವತಿ ಹೈಬತ್ತಿಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts