More

    ಕರೊನಾ ವೈರಸ್, ಸ್ತಬ್ಧವಾದ ವಾರದ ಸಂತೆ

    ಚಡಚಣ: ಜಿಲ್ಲೆಯಾದ್ಯಂತ ಕರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಪಂ ವ್ಯಾಪ್ತಿಯಲ್ಲಿ ಬುಧವಾರ ಜರುಗಬೇಕಾಗಿದ್ದ ವಾರದ ಸಂತೆ ಮತ್ತು ದನಗಳ ಸಂತೆಯನ್ನು ರದ್ದುಪಡಿಸಿದ ಹಿನ್ನೆಲೆ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿರುವುದು ಪಟ್ಟಣದಲ್ಲಿ ಕಂಡು ಬಂದಿತು.

    ಪಟ್ಟಣದ ವ್ಯಾಪಾರಸ್ಥರು ಬೆಳಗ್ಗೆಯೇ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಪ್ರಮುಖ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ವಾರದ ಸಂತೆ ರದ್ದುಗೊಂಡಿದ್ದನ್ನು ತಿಳಿಯದ ಸುತ್ತಲಿನ ಗ್ರಾಮಸ್ಥರು ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದರು. ಸಂತೆ ಬಂದ್ ಮಾಡಿದ ನಿಮಿತ್ತ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಾಲೂಕಾಡಳಿತಕ್ಕೆ ಹಿಡಿ ಶಾಪ ಹಾಕಿ ತಮ್ಮ ತಮ್ಮ ಗ್ರಾಮಗಳ ಕಡೆ ಮುಖ ಮಾಡಿದರು. ಸಣ್ಣ ಪುಟ್ಟ ಕಾಯಿಪಲ್ಲೆ ವ್ಯಾಪಾರಸ್ಥರು ಪಟ್ಟಣದ ವಾರ್ಡ್‌ಗಳಲ್ಲಿ ಅಲೆದಾಡಿ ಮನೆಮನೆಗೆ ತೆರಳಿ ವ್ಯಾಪಾರ ಮಾಡಿಕೊಂಡು ಹೋದರು.

    ಪಟ್ಟಣದಲ್ಲಿ ಬುಧವಾರ ನಡೆಯುವ ವಾರದ ಸಂತೆ ಜಿಲ್ಲೆಯಲ್ಲೇ ಪ್ರಸಿದ್ಧಿ ಹೊಂದಿದ್ದು, ನೆರೆಯ ಮಹಾರಾಷ್ಟ್ರ ರಾಜ್ಯದ ಸಾಂಗಲಿ, ಸೋಲಾಪುರ, ನೆರೆಯ ಕಲಬುರ್ಗಿ ಜಿಲ್ಲೆಯ ವ್ಯಾಪಾರಸ್ಥರು ಹಾಗೂ ರೈತರು ಇಲ್ಲಿಗೆ ಬಂದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಆದರೆ, ತಾಲೂಕು ಆಡಳಿತ ಕೈಗೊಂಡ ದಿಟ್ಟ ನಿರ್ಧಾರದಿಂದ ವ್ಯಾಪರಸ್ಥರಿಲ್ಲದೆ, ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಪಟ್ಟಣ ಪಪಂ ಸಿಬ್ಬಂದಿ ವಾರದ ಸಂತೆಗೆ ಆಗಮಿಸುವ ವ್ಯಾಪಾರಸ್ಥರನ್ನು ಹಾಗೂ ರೈತರನ್ನು ಮನವೊಲಿಸಿ ಮರಳಿ ಗ್ರಾಮಗಳಿಗೆ ತೆರಳುವಂತೆ ಸೂಚಿಸುತ್ತಿರುವುದು ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts