More

    ಏಕತೆ ಮೂಡಿಸುವುದೇ ಶಿಕ್ಷಣ

    ಚಡಚಣ: ವಿವಿಧತೆಯಲ್ಲಿ ಏಕತೆ ಮೂಡಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶವಾಗಿದೆ ಎಂದು ಕಾತ್ರಾಳ ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು.

    ಚಡಚಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಹಕಾರಿ ಸಂಘದ 51ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಶೈಕ್ಷಣಿಕ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ 15ರೂಗಳಲ್ಲಿ ಪ್ರಾರಂಭಿಸಿದ ಈ ಸಹಕಾರಿ ಬ್ಯಾಂಕ್ ಸದ್ಯ 10.6 ಕೋಟಿ ರೂ. ಬಂಡವಾಳ ಹೊಂದಿದೆ ಎಂದರು.

    ಉಡುಪಿ ಜಿಲ್ಲೆಯ ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ‘ಶಿಕ್ಷಣದಲ್ಲಿ ರಾಷ್ಟ್ರೀಯತೆ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ತಾಯಿಯೇ ಮೊದಲ ಗುರು, ತಂದೆ ಎರಡನೇ ಗುರು. ನಂತರ ಶಿಕ್ಷಕ ಮೂರನೇ ಗುರು ಎಂದು ಹೇಳಿದ ಅವರು, ಅದರಂತೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಮೇಲೆ ಅವರನ್ನು ಮಾಜಿ ಎಂಬ ಪದ ಸೇರಿಸಿ ಕರೆಯುತ್ತಾರೆ. ಆದರೆ, ಶಿಕ್ಷಕ ನಿವೃತ್ತಿ ಹೊಂದಿದ ಮೇಲೂ ಸಮಾಜದಲ್ಲಿ ಯಾವತ್ತೂ ಮಾಜಿ ಶಿಕ್ಷಕ ಎಂದು ಕರೆಯಲ್ಪಡುವುದಿಲ್ಲ. ಅದುವೇ ಸಮಾಜ ಶಿಕ್ಷಕನಿಗೆ ನೀಡುವ ಗೌರವಾಧರ ಎಂದು ಅವರು ಹೇಳಿದರು.

    ಬರಡೋಲ ಮೂರುಝಾವದೀಶ್ವರ ಮಠದ ಮೌನೇಶ್ವರ ಸ್ವಾಮೀಜಿ, ಚಡಚಣ ಗುರುದೇವಾಶ್ರಮದ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಹಕಾರಿ ಸಂಘದ ಎಲ್ಲ ಹಂತದ ಪದಾಧಿಕಾರಿಗಳು, ಪಪಂ ಸದಸ್ಯರು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts