More

    ಏ.೧೮ ರಿಂದ ಸಿಇಟಿ ಪರೀಕ್ಷೆ

    ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಕಾರ(ಕೆಇಎ) ನಡೆಸುವ ೨೦೨೪ರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ರಾಜ್ಯಾದ್ಯಂತ ಏ.೧೮-೧೯ರಂದು ನಡೆಯಲಿದೆ. ಸಿಇಟಿಗೆ ೩,೨೭,೩೮೪ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಈ ವರ್ಷವೇ ಅತಿ ಹೆಚ್ಚಿನ ಅಭ್ಯರ್ಥಿಗಳು ಸಿಇಟಿಗೆ ನೋಂದಾಯಿಸಿಕೊಂಡಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಬೆಳಗ್ಗೆ ೧೦.೩೦ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ವಿರಾಮ ಸಮಯ ಸೇರಿ ೩.೫೦ರವರೆಗೆ ಪರೀಕ್ಷೆ ನಡೆಯಲಿದೆ. ಏ.೧೮ ರಂದು ಜೀವಶಾಸ-ಗಣಿತಶಾಸ ಮತ್ತು ಏ.೧೯ರಂದು ಭೌತಶಾಸ- ರಸಾಯನಶಾಸ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಮಾನ್ಯತೆ ಇರುವ ಗುರುತಿನ ಚೀಟಿಯನ್ನು ತೋರಿದರೆ ಮಾತ್ರ ಅಭ್ಯರ್ಥಿಗಳಿಗೆ ಕೊಠಡಿ ಪ್ರವೇಶ ಎಂದು ಕೆಇಎ ತಿಳಿಸಿದೆ. ಮೊದಲನೇ ಬೆಲ್ ೧೦.೨೦ಕ್ಕೆ ಹೊಡೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗಳನ್ನು ಓದಿಕೊಂಡು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಕೆಇಎ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts