More

    ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟಿಗೆ ಶಿವಸೇನೆಯ ಒಳಜಗಳವೇ ಕಾರಣ: ಪ್ರಲ್ಹಾದ್​ ಜೋಶಿ

    ಗದಗ: ಸದ್ಯ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯೇ ಕಾರಣ, ಅವರ ಸರ್ಕಾರ ಪತನವಾದರೆ ಅದಕ್ಕೆ ಅವರ ನಡುವಿನ ಒಳಜಗಳಗಳೇ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

    ನರಗುಂದ ಪಟ್ಟಣದಲ್ಲಿ ಮಾತನಾಡಿದ ಅವರು, ಇದಕ್ಕೆ ಶಿವಸೇನೆ ಶಾಸಕರು ಬರೆದಿರುವ ಪತ್ರ ಸಾಕ್ಷಿ ಇದೆ. ಅದು ಅಸ್ವಾಭಾವಿಕ ಮೈತ್ರಿ ಅಂತಾ ಅಲ್ಲಿಯ ನಾಯಕರೇ ಹೇಳಿದ್ದಾರೆ.ಎನ್​​ಸಿಪಿ, ಕಾಂಗ್ರೆಸ್ ವಿರುದ್ಧ ಬಾಳಾ ಸಾಹೇಬರು ಹೋರಾಟ ಮಾಡಿದವರು ಆದರೆ ಇಂದು ಏನಾಗಿದೆ ಎಂಬುದನ್ನು ಜನತೆ ನೋಡುತ್ತಿದ್ದಾರೆ ಎಂದು ಹೇಳಿದರು.

    ಎನ್​ಸಿಪಿಯವರಿಂದಲೇ ಮುಖ್ಯಮಂತ್ರಿಗಳನ್ನು ರಿಮೋಟ್​ ಕಂಟ್ರೋಲ್​ನಲ್ಲಿಟ್ಟುಕೊಂಡಿದ್ದರು ಎಂಬ ಆರೋಪವಿದೆ. ಇದರಿಂದ ಶಿವಸೇನೆ ಶಾಸಕರು, ಕಾರ್ಯಕರ್ತರೇ ನಿರಾಶೆಗೊಂಡಿದ್ದಾರೆ. ಇವರ ತಪ್ಪಿನಿಂದ ಇಡೀ ಪಕ್ಷವೇ ಅಸಮಾಧಾನಗೊಂಡಿದ್ದಾರೆ ಎಂದರು.

    ಒಂದಿಬ್ಬರು ಪಕ್ಷ ತೊರೆಯಬಹುದು. ಆದ್ರೆ ಇಲ್ಲಿ ಪಕ್ಷಕ್ಕೆ ಪಕ್ಷವೇ ಹೋಗಿದೆ.ಇನ್ನೆರಡು ದಿನ ತಡೆದ್ರೆ ಉದ್ಧವ್ ಠಾಕ್ರೆ, ಅದಿತ್ಯ ಠಾಕ್ರೆ ಬಿಟ್ರೆ ಎಲ್ಲರೂ ಹೋಗುವ ಹಾಗಿದೆ.ಹೊರಗಿನವರು ಷಡ್ಯಂತ್ರ ರೂಪಿಸಿ ಇಡೀ ಪಾರ್ಟಿ ತೆಗೆದುಕೊಂಡು ಹೋಗುವುದಕ್ಕೆ ಆಗಲ್ಲ.ಅವರ ವಿಚಾರ ಧಾರೆ ಯಾವುದು ಅನ್ನೋದು ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ಸನ್ನು ಟಾರ್ಗೆಟ್​ ಮಾಡುವ ಅವಶ್ಯಕತೆಯೇ ಇಲ್ಲ, ಅದು ಅದಾಗಿಯೇ ಮುಗಿದು ಹೋಗಲಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಶಿವಸೇನೆಯಿಂದ ಅನರ್ಹ ಅಸ್ತ್ರ: 16 ಬಂಡಾಯ ಶಾಸಕರಿಗೆ ನೋಟಿಸ್​, ಸೋಮವಾರದೊಳಗೆ ಉತ್ತರಿಸಲು ಸೂಚನೆ

    ಶಿವಸೇನೆಯಿಂದ ಅನರ್ಹ ಅಸ್ತ್ರ: 16 ಬಂಡಾಯ ಶಾಸಕರಿಗೆ ನೋಟಿಸ್​, ಸೋಮವಾರದೊಳಗೆ ಉತ್ತರಿಸಲು ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts