More

    ಸಿಸಿಆರ್‌ಎನ್‌ವೈಯಲ್ಲಿ ವಿವಿಧ ಹುದ್ದೆಗಳು: ಅರ್ಜಿ ಸಲ್ಲಿಕೆಗೆ ನಾಳೆ ಕೊನೇ ದಿನ

    ಬೆಂಗಳೂರು: ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಆ್ಯಂಡ್ ನ್ಯಾಚುರೋಪತಿಯು ಯೋಗ ಮತ್ತು ಪ್ರಕೃತಿಚಿಕಿತ್ಸೆ ಕ್ಷೇತ್ರದಲ್ಲಿ ಶಿಕ್ಷಣ, ತರಬೇತಿ, ಪ್ರಚಾರ ಮತ್ತು ಸಂಶೋಧನೆಯಲ್ಲಿ ತೊಡಗಿದ್ದು, ಆಯುಷ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಮಂಡಳಿಯಾಗಿದೆ. ಪ್ರಸ್ತುತ ಈ ಸಂಸ್ಥೆಯು ಸಲಹೆಗಾರ, ಸಂಶೋಧನಾ ಅಧಿಕಾರಿ, ವೈದ್ಯಕೀಯ ಅಧಿಕಾರಿ, ಸಹಾಯಕ, ಹಿರಿಯ ಸಂಶೋಧನಾ ಸಹೋದ್ಯೋಗಿ ಮತ್ತು ಇತರ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿ ಆಧರಿಸಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. 

    ಒಟ್ಟು ಹುದ್ದೆ
    100

    ಹುದ್ದೆಗಳ ವಿವರ
    ಕನ್ಸಲ್ಟೆಂಟ್(ಅಡ್ಮನ್) 1
    ರಿಸರ್ಚ್ ಆಫೀಸರ್ (ಯೋಗ ಆ್ಯಂಡ್ ನ್ಯಾಚುರೋಪತಿ) 6
    ರಿಸರ್ಚ್ ಆಫೀಸರ್ (ನೇಯುರೋಫಿಸಿಯೋಲಾಜಿ) 2
    ರಿಸರ್ಚ್ ಆಫೀಸರ್ (ಲ್ೈ ಸೈನ್ಸನ್ಸ್) 2
    ರಿಸರ್ಚ್ ಆಫೀಸರ್ (ಕ್ಲಿನಿಕಲ್ ಸೈಕಾಲಜಿ) 2
    ಮೆಡಿಕಲ್ ಆಫೀಸರ್ (ಅಲೋಪತಿ) 2
    ಸ್ಟ್ಯಾಟಿಸ್ಟಿಕಲ್ ಅಸಿಸ್ಟೆಂಟ್ 1
    ಅಸಿಸ್ಟೆಂಟ್/ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ 2
    ಜೂನಿಯರ್ ಹಿಂದಿ ಟ್ರಾನ್ಸ್‌ಲೇಟರ್ 2
    ಅಸಿಸ್ಟೆಂಟ್ 2
    ನ್ಯಾಚುರೋಪತಿ ಥೆರಪಿಸ್ಟ್ 26

    ಇತರ 52

    ವಿದ್ಯಾರ್ಹತೆ
    ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಪದವಿ/ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಬಿಎನ್‌ವೈಎಸ್, ಪಿಜಿ, ಪಿಎಚ್.ಡಿ(ಯೋಗಾ/ನ್ಯಾಚುರೋಪತಿ), ಎಂಬಿಬಿಎಸ್/ ತತ್ಸಮಾನ ಪದವಿ ಪೂರ್ಣಗೊಳಿಸಿರಬೇಕು.

    ವಯೋಮಿತಿ, ವೇತನ
    ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಯ ವಯಸ್ಸು ಕನಿಷ್ಠ 25ವರ್ಷದಿಂದ ಗರಿಷ್ಠ 64ವರ್ಷದೊಳಗಿರಬೇಕು. ವಯೋಸಡಿಲಿಕೆ ಅನ್ವಯವಾಗಲಿದೆ. 16,000ರೂ.-56,100ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ
    ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಕೆ / ಹೆಚ್ಚಿನ ಮಾಹಿತಿಗಾಗಿ
    www.naturopathyday.in.

    ಅರ್ಜಿಸಲ್ಲಿಸಲು ಕೊನೇ ದಿನ
    04-01-2024

    AIESLನಲ್ಲಿ ಪದವಿ ಪಾಸಾದವರಿಗೆ ಉದ್ಯೋಗಾವಕಾಶ: 283 ಹುದ್ದೆಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts