More

    ಕೋವಿಡ್​ನಿಂದ ಮೃತಪಟ್ಟವರಿಗೆ ಇಲ್ಲಿ ಉಚಿತವಾಗಿ ಅಂತ್ಯಸಂಸ್ಕಾರ; ಈ ಚಿತಾಗಾರಗಳು ಸೋಂಕಿತ ಶವಗಳಿಗೆಂದೇ ಮೀಸಲು

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಜತೆಗೆ ಕರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಪ್ರಮಾಣವೂ ಹೆಚ್ಚಾಗಿದೆ. ಈ ಮಧ್ಯೆ ಸೋಂಕಿಗೆ ಒಳಗಾಗಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆಂದು ಚಿತಾಗಾರಗಳನ್ನು ಮೀಸಲಿಡಲಾಗಿದೆ.

    ರಾಜ್ಯದ ಒಟ್ಟು ಸೋಂಕಿನ ಪ್ರಕರಣಗಳ ಪೈಕಿ ಬಹುತೇಕ ಭಾಗ ಬೆಂಗಳೂರಿನಲ್ಲೇ ಇರುವುದರಿಂದ ಸೋಂಕಿಗೆ ಒಳಗಾಗಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ರಾಜಧಾನಿಯ 13 ವಿದ್ಯುತ್ ಚಿತಾಗಾರಗಳ ಪೈಕಿ ಏಳನ್ನು ಮೀಸಲಿಟ್ಟಿದೆ. ಮಾತ್ರವಲ್ಲ ಸೋಂಕಿಗೆ ಬಲಿಯಾದವರ ಪಾರ್ಥಿವ ಶರೀರಕ್ಕೆ ಈ ನಿಗದಿತ ಚಿತಾಗಾರಗಳಲ್ಲಿ ಉಚಿತವಾಗಿ ಸಂಸ್ಕಾರ ನಡೆಸಲಾಗುವುದು ಎಂದು ಅದು ತಿಳಿಸಿದೆ.

    ಇದನ್ನೂ ಓದಿ: ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಹಾಗೆಯೇ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು 260 ಆ್ಯಂಬುಲೆನ್ಸ್​ಗಳನ್ನು ಮತ್ತು ಸೋಂಕಿಗೆ ಬಲಿಯಾದವರು ಶವಗಳನ್ನು ಸ್ಮಶಾನಕ್ಕೆ ಕೊಂಡೊಯ್ಯಲು 49 ಶವಸಾಗಣೆ ವಾಹನಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪಾಲಿಕೆ ನಿಯೋಜಿಸಿದೆ. ಈ ಎರಡೂ ಸೇವೆಗಳು ಉಚಿತ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

    ಬೆಂಗಳೂರಿನಲ್ಲಿ ಮೀಸಲಿಟ್ಟ ಚಿತಾಗಾರಗಳ ವಿವರ

    • ಕೂಡ್ಲು ವಿದ್ಯುತ್ ಚಿತಾಗಾರ
    • ಪಣತೂರ್​ ವಿದ್ಯುತ್ ಚಿತಾಗಾರ
    • ಮೇಡಿ ವಿದ್ಯುತ್ ಚಿತಾಗಾರ
    • ಕೆಂಗೇರಿ ವಿದ್ಯುತ್ ಚಿತಾಗಾರ
    • ಬನಶಂಕರಿ ವಿದ್ಯುತ್ ಚಿತಾಗಾರ
    • ಪೀಣ್ಯ ವಿದ್ಯುತ್ ಚಿತಾಗಾರ
    • ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts