More

    ಮಾದಾರ ಚೆನ್ನಯ್ಯ ಜಯಂತಿ ಪ್ರತ್ಯೇಕವಾಗಿ ಆಚರಿಸಿ

    ರಾಯಚೂರು: ಶಿವಶರಣ ಮಾದಾರ ಚೆನ್ನಯ್ಯ ಜಯಂತಿಯನ್ನು ಜಿಲ್ಲಾಡಳಿತದಿಂದ ಪ್ರತ್ಯೇಕವಾಗಿ ಆಚರಿಸಬೇಕು ಎಂದು ಆದಿಜಾಂಬವ ಸೇವಾ ಕ್ಷೇಮಾಭಿವೃದ್ಧಿ ಟ್ರಸ್ಟ್ ಮತ್ತು ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ಒತ್ತಾಯಿಸಿವೆ.
    ಸಂಘಟನೆಗಳ ನಿಯೋಗ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಮಂಗಳವಾರ ಮನವಿ ಸಲ್ಲಿಸಿ, ಪ್ರತಿ ವರ್ಷ ಜಿಲ್ಲಾಡಳಿತದಿಂದ ಐದು ಜನ ಕಾಯಕ ಶರಣರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಲಾಗುತ್ತಿದ್ದು, ಮಾದಾರ ಚೆನ್ನಯ್ಯರ ಜಯಂತಿ ಪ್ರತ್ಯೇಕವಾಗಿ ಆಚರಿಸಬೇಕು ಎಂದು ಆಗ್ರಹಿಸಿದರು.
    ಬಸವೇಶ್ವರ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಸೇರಿದಂತೆ ಇನ್ನಿತರ ಶರನರ ಜಯಂತಿಗಳನ್ನು ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿದೆ. ಆದರೆ ಮಾದಾರ ಚೆನ್ನಯ್ಯ ಸೇರಿದಂತೆ ಐವರು ಶರಣರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸದೆ ಪ್ರತ್ಯೇಕವಾಗಿ ಆಚರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ನಿಯೋಗದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಬಿ.ಎಚ್.ಗುಂಡಳ್ಳಿ, ಅಧ್ಯಕ್ಷ ರಾಮಣ್ಣ, ಪದಾಕಾರಿಗಳಾದ ವೆಂಕಟೇಶ, ಬಸವರಾಜ ಅತ್ತನೂರು, ತಿಮ್ಮಪ್ಪ, ಯಮನಪ್ಪ ಗಿರಿಜಾಲಿ, ರಾಮಚಂದ್ರ ಭೀಮರಾಯ ನಕ್ಕುಂದಿ, ಬಿ.ಗಂಗಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts