More

    ಅಂಗನವಾಡಿಗಳ ನಿರ್ಮಾಣಕ್ಕೆ ನೆರವು ಕೋರಿ ಪ್ರಸ್ತಾವನೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಮಾಹಿತಿ

    ತುಮಕೂರು : ರಾಜ್ಯದಲ್ಲಿ 2000 ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲು ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದರು.

    ನಗರದ ಜಿಲ್ಲಾ ಬಾಲಭವನದಲ್ಲಿ ಗುರುವಾರ 2.33 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಜಿಲ್ಲೆಯ ವಿವಿಧೆಡೆಯ 25 ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದಲ್ಲಿ ಪ್ರಸ್ತುತ 65911 ಅಂಗನವಾಡಿಗಳಿದ್ದು, 128000ಕ್ಕೂ ಹೆಚ್ಚು ಕಾರ್ಯಕರ್ತೆಯರು ಇದ್ದಾರೆ. ಅಂಗನವಾಡಿ ಕಟ್ಟಡ ಕೊರತೆ ಇರುವ ಕಡೆ ನೂತನವಾಗಿ ನಿರ್ಮಿಸಲು ಕೇಂದ್ರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ತುಮಕೂರು ನಗರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಗಳ ನಿರ್ವಾಣಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ 5 ಕೋಟಿ ರೂಪಾಯಿ ಒದಗಿಸಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಜಿಲ್ಲೆಯಲ್ಲಿ ಸುವಾರು 13 ಅಂಗನವಾಡಿ ಕಟ್ಟಡಗಳನ್ನು ನೀಡಿರುವ ಸಚಿವ ಜೆ.ಸಿ.ವಾಧುಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ ಸಚಿವೆ, ಕಟ್ಟಡದ ಅಗತ್ಯವಿರುವಲ್ಲಿ ನಿವೇಶನ ಒದಗಿಸಬೇಕೆಂದು ಜಿಲ್ಲೆಯ ಶಾಸಕರಲ್ಲಿ ಮನವಿ ವಾಡಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಯೋಜನೆಗಳನ್ನು ತಳಮಟ್ಟದವರೆಗೂ ತಲುಪಿಸುವಲ್ಲಿ ಶ್ರಮಿಸುತ್ತಿದೆ. ಕರೊನಾ ಸಂಕಷ್ಟದಲ್ಲಿ ಸೈನಿಕರಾಗಿ ಮನೆಮನೆ ಸಮೀಕ್ಷೆ ಕೈಗೊಂಡು ರೋಗ ಹತೋಟಿಗೆ ತರುವಲ್ಲಿ ಶ್ರಮಿಸಿದ ಎಲ್ಲ ಅಂಗನನಾಡಿ ಕಾರ್ಯಕರ್ತೆ, ಸಹಾಯಕರ ಸೇವೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

    ಕುಂದುಕೊರತೆ ಬಗ್ಗೆ ನಿಗಾವಹಿಸಲು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ೆನ್ ನೀಡಲಾಗುತ್ತಿದೆ. ಇದರಿಂದ ಆಯಾ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿರುವ ಗರ್ಭಿಣಿ, ಬಾಣಂತಿಯರು, ಮಕ್ಕಳ ಅಂಕಿ-ಅಂಶಗಳು, ಇಲಾಖೆ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ವಾಹಿತಿ ತಿಳಿಯಲು ನೆರವಾಗಲಿದೆ ಎಂದರು.

    ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ವಸತಿ ಸೌಕರ್ಯ ಕಲ್ಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ತರಬೇತಿ ನೀಡಲು ಮಹಿಳಾ ಸ್ವಾದರ ಕೇಂದ್ರ ಹಾಗೂ ಕುಟುಂಬ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಉಚಿತವಾಗಿ ಸವಾಲೋಚನೆ ನೀಡಿ ಪ್ರಕರಣ ಇತ್ಯರ್ಥಪಡಿಸಲು ಸಾಂತ್ವನ ಕೇಂದ್ರಗಳು ಇಲಾಖೆಯಡಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.

    ಅಂಗವಿಕಲರಿಗಾಗಿ ರಾಜ್ಯದಲ್ಲಿ 1600 ದ್ವಿಚಕ್ರವಾಹನ, ಅಂಧ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 450 ಟಾಕಿಂಗ್ ಲ್ಯಾಪ್‌ಟಾಪ್ ಒದಗಿಸಲಾಗಿದೆ. ಅಲ್ಲದೆ 900 ಅಂಗನವಾಡಿ ಕೇಂದ್ರಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುವಾರ್, ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮತ್ತಿತರರು ಇದ್ದರು.

    ಕಾರ್ಯಕರ್ತೆಯರ ಸೇವೆ ಶ್ಲಾನೀಯ ತಾಯಂದಿರು, ಮಕ್ಕಳ ಸೇವೆ ವಾಡುವ ಪುಣ್ಯದ ಕೆಲಸ ಇಲಾಖೆ ವಾಡುತ್ತಿದೆ. ಅವಾಯಕರು, ನಿರ್ಗತಿಕರು, ಹಸುಗೂಸುಗಳಿಗೆ ನೆರವಾಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ ಹೇಳಿದರು.

    ಮಕ್ಕಳ ಶುಶ್ರೂಷೆ ಗರ್ಭದಿಂದಲೇ ಆಗಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರ ಮಹತ್ತರ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ದೇಶಕ್ಕೆ ಉತ್ತಮ ಯುವ ಶಕ್ತಿಯನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ ಎಂದರು.

    ಜಿಲ್ಲೆಯಲ್ಲಿ ಶೇ.10 ಜನ ಇನ್ನೂ ಅನಕ್ಷರಸ್ಥರು ಎಂಬುದು ನಮಗೆ ನಾಚಿಕೆ ತರಿಸುತ್ತಿದೆ. ಸ್ವಾತಂತ್ರ್ತ್ಯ ದೊರೆತು 70 ವರ್ಷ ಕಳೆದರೂ ತುಮಕೂರಿನಲ್ಲಿ ಇಂದಿಗೂ 2 ಲಕ್ಷ ಅನಕ್ಷರಸ್ಥರಿದ್ದಾರೆ. ಮುಂದಿನ ಐದಾರು ವರ್ಷಗಳಲ್ಲಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಬೇಕಿದೆ.
    ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts