More

    ಐದು ದಿನಗಳ ಸಿಡಿ ಹಬ್ಬಕ್ಕೆ ಚಾಲನೆ

    ಮಳವಳ್ಳಿ: ಪಟ್ಟಣದಲ್ಲಿ ಐದು ದಿನಗಳ ಕಾಲ ನಡೆಯುವ ಸಿಡಿ ಹಬ್ಬಕ್ಕೆ ಮಂಗಳವಾರ ಚಾಲನೆ ದೊರೆಯಿತು.

    ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ದೊಡ್ಡಕೆರೆ ಪಕ್ಕದಲ್ಲಿರುವ ದಂಡಿನ ಮಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಸ್ಥಾನವನ್ನು ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು. ದಂಡಿನ ಮಾರಮ್ಮ ದೇವಿಯ ವಿಗ್ರಹವನ್ನು ಮುತ್ತಿನ ಮಣಿಗಳು ಹಾಗೂ ಬಂಗಾರದ ಒಡವೆಗಳಿಂದ ಅಲಂಕರಿಸಲಾಗಿತ್ತು. ಬೆಳಗಿನ ಜಾವದಿಂದಲೇ ಅರ್ಚಕ ವೃಂದ ವಿವಿಧ ಹೋಮ ಹವನಗಳನ್ನು ನೆರವೇರಿಸಿದರು.

    ಪಟ್ಟಣ ಸೇರಿದಂತೆ ತಮ್ಮಡಹಳ್ಳಿ, ಎಂ.ಬಸವನಪುರ, ಮಾಗನೂರು, ಭುಗತಗಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ, ತಳಗವಾದಿ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಹಬ್ಬ ಆಚರಿಸಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸದಸ್ಯರೊಡನೆ ತಂಬಿಟ್ಟಿನ ಆರತಿ ಹಿಡಿದು ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿ ಗ್ರಾಮ ದೇವತೆಯ ದರ್ಶನ ಪಡೆದರು. ಅಲ್ಲದೆ ಕೋಳಿಗಳನ್ನು ದೇವಾಲಯದ ಆವರಣದಲ್ಲಿ ಕೊಯ್ದು ಹರಕೆ ತೀರಿಸಿ ಮನೆಗಳಿಗೆ ಕೊಂಡೊಯ್ದರು. ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲಿನ ಅಂಗಳದಲ್ಲಿ ತೆರೆದಿದ್ದ ಮಕ್ಕಳ ಆಟಿಕೆ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು. ಜನದಟ್ಟಣೆ ಹೆಚ್ಚಿದ್ದರಿಂದ ಪಟ್ಟಣ ಪೊಲೀಸರು ಸೂಕ್ತ ಭದ್ರತೆ ನೀಡುವುದರ ಜತೆಗೆ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts