More

    ಭಾರತಕ್ಕೆ ಬರಲೊಲ್ಲೆ ಎಂದ ಡಾನ್​ ರವಿ ಪೂಜಾರಿಯನ್ನು ಕಳಿಸಲು ಸೆನೆಗೆಲ್​ ಪೊಲೀಸರು ಮಾಡಿದ ಉಪಾಯವೇನು ಗೊತ್ತ!

    ಬೆಂಗಳೂರು: ಕುಖ್ಯಾತ ಡಾನ್ ರವಿ ಪೂಜಾರಿಗೆ ಸಿಸಿಬಿ ಪೊಲೀಸರು ಡ್ರಿಲ್ ಮಾಡಿದ್ದಾರೆ. ಹಳೆಯ ಪ್ರಕರಣದ ದೂರುದಾರರನ್ನು ಕರೆಯಿಸಿ ಹೇಳಿಕೆ‌ ಪಡೆಯುತ್ತಿದ್ದಾರೆ.

    ಹಳೆಯ 13 ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು. ಈ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ರವಿ ಪೂಜಾರಿಗೆ ಪ್ರಶ್ನೆ ಕೇಳಿದರೆ, ಇರಬಹುದು ನಾನು ಮಾಡಿಸಿರಬಹುದು ಆದರೆ ನೆನಪಿಲ್ಲ ಎನ್ನುತ್ತಿದ್ದಾನೆ.

    ಬೆದರಿಕೆ ಕರೆ ಬಂದ ನಂಬರ್ ತೋರಿಸಿ, ಇದು ಯಾರ ನಂಬರ್ ಎಂದು ಕೇಳಿದ ಸಿಸಿಬಿ ಅಧಿಕಾರಿಗಳಿಗೆ ನಾನೇ ಮಾಡಿರಬಹುದು ಸರ್ ಎಂದು ಉತ್ತರಿಸುತ್ತಿದ್ದಾನೆ.

    ರವಿ ಪೂಜಾರಿ ಸೆನೆಗಲ್ ಜೈಲಿನಲ್ಲಿ ಒಂದು ವರ್ಷ ಎರಡು ತಿಂಗಳು ಇದ್ದ. ಆತ ಅಲ್ಲಿಂದ ಬಿಡುಗಡೆ ಆಗಿರಲಿಲ್ಲ. ಇತ್ತೀಚೆಗೆ ಭಾರತಕ್ಕೆ ಹಸ್ತಾಂತರ ಮಾಡುವರೆಗೂ ಜೈಲಿನಲ್ಲಿಯೇ ಇದ್ದ, ಅಲ್ಲದೆ, ಭಾರತಕ್ಕೆ ಕಳಿಸಬೇಡಿ ಎಂದು ಸೆನೆಗಲ್ ಪೊಲೀಸರಿಗೆ ಹೇಳಿದ್ದ ರವಿ ಪೂಜಾರಿ, ನಾನು ಎಲ್ಲಿಗೂ ಹೋಗುವುದಿಲ್ಲ ಎಂದು‌ ಪಟ್ಟು ಹಿಡಿದಿದ್ದ.

    ರವಿ ಪೂಜಾರಿ ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಪೊಲೀಸರು ಹೊಸ ಉಪಾಯ ಮಾಡಿದ್ದರು. ಅದರಂತೆ ಸೆನೆಗಲ್‌ನಿಂದ ಮತ್ತೊಂದು ಜೈಲಿಗೆ ಶಿಫ್ಟ್ ಮಾಡುವುದಾಗಿ ನಂಬಿಸಿ, ಭಾರತದ ಪೊಲೀಸರಿಗೆ ಒಪ್ಪಿಸಿದ್ದಾರೆ.

    ತನ್ನ ವಕೀಲರನ್ನು ಭೇಟಿಯಾಗದೆ ನಾನು ಎಲ್ಲಿಗೂ ಬರುವುದಿಲ್ಲ ಎಂದಿದ್ದ ರವಿ, ಪೊಲೀಸರ ಮುಂದೆಯೇ ತನ್ನ‌ ವಕೀಲನ ಮೇಲಿನ‌ ಕೋಪ ಹೊರಹಾಕಿದ್ದ. ಆ ಲಾಯರ್​ ಸರಿಯಾಗಿದ್ದಿದ್ದರೆ ನಾನು ಅಲ್ಲೆ ಇರುತ್ತಿದ್ದೆ ಎಂದು ಪೂಜಾರಿ ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.

    ನಮ್ಮ ವಶಕ್ಕೆ ನೀಡಿ: ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಬಳಿಕ ಇದೀಗ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ರವಿ ಪೂಜಾರಿಯನ್ನು ತಮ್ಮ ವಶಕ್ಕೆ ನೀಡಲು ಕೋರುತ್ತಿದ್ದಾರೆ.

    2018ರಲ್ಲಿ ಮಲಯಾಳಂ ನಟಿ ಲೀನಾ‌ ಮರಿಯಾ ಪೌಲ್​ಗೆ ಹಣಕ್ಕೆ ಬೇಡಿಕೆ ಇಟ್ಟು ಕರೆ ಮಾಡಿ ಬೆದರಿಕೆ ಹಾಕಿದ್ದ ರವಿ ಪೂಜಾರಿ. ಈ ಪ್ರಕರಣ ತನಿಖೆ ನಡೆಸುತ್ತಿರುವ ಕೇರಳ ಸಿಐಡಿ ಪೊಲೀಸರು. ಬೆಂಗಳೂರಿಗೆ ಬಂದು ಸಿಸಿಬಿ ಪೊಲೀಸರ ಜತೆ ಮಾತುಕತೆ ನಡೆಸಿದ್ದಾರೆ.

    ಮಾರ್ಚ್ 7ರಂದು ರವಿ ಪೂಜಾರಿ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಮುಂಬೈ ಮತ್ತು ಕೇರಳ ಪೊಲೀಸರ ಪೈಪೋಟಿ ನಡೆಸಿದ್ದಾರೆ. ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿರುವ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts