More

    ಸಿಬಿಎಸ್​ಇ 12ನೇ ತರಗತಿ : ಮೇಜರ್​ ಸಬ್ಜೆಕ್ಟ್​ಗಳಿಗೆ ಮಾತ್ರ ಪರೀಕ್ಷೆ ನಡೆಸುವ ಚಿಂತನೆ ?!

    ನವದೆಹಲಿ : ಕರೊನಾ ಸಾಂಕ್ರಾಮಿಕದ ಸನ್ನಿವೇಶದಲ್ಲಿ ಸೆಂಟ್ರಲ್ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಶನ್ (ಸಿಬಿಎಸ್​​ಇ), 12ನೇ ತರಗತಿ ಪರೀಕ್ಷೆಗಳನ್ನು ಮೇಜರ್​ ಸಬ್ಜೆಕ್ಟ್​ಗಳಿಗೆ ಮಾತ್ರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಎರಡು ಪ್ರಸ್ತಾವನೆಗಳನ್ನು ಸಿಬಿಎಸ್​ಇ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಿದ್ದು, ನಾಳೆ ನಡೆಯಲಿರುವ ಎಲ್ಲಾ ರಾಜ್ಯಗಳ ಶಿಕ್ಷಣ ಮಂತ್ರಿಗಳ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.

    ಸಿಬಿಎಸ್​ಇ ಅಡಿ 12 ನೇ ತರಗತಿ ವಿದ್ಯಾರ್ಥಿಗಳಿಗೆ 174 ವಿಷಯಗಳು ಲಭ್ಯವಿದ್ದರೂ, ಇವುಗಳಲ್ಲಿ ಕೆಲವು ವಿಷಯಗಳನ್ನು ಮಾತ್ರ ಪ್ರಮುಖ ವಿಷಯ(ಮೇಜರ್​ ಸಬ್ಜೆಕ್ಟ್​)ಗಳನ್ನಾಗಿ ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ, ವ್ಯವಹಾರ ಅಧ್ಯಯನಗಳು, ಅಕೌಂಟನ್ಸಿ, ಭೌಗೋಳಿಕತೆ, ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಮುಂತಾದವು ಸೇರಿವೆ. ಯಾವುದೇ ಸಿಬಿಎಸ್‌ಇ ವಿದ್ಯಾರ್ಥಿಯು ಕನಿಷ್ಠ ಐದು ಮತ್ತು ಗರಿಷ್ಠ ಆರು ವಿಷಯಗಳನ್ನು ತೆಗೆದುಕೊಳ್ಳುತ್ತಾನೆ. ಇವುಗಳಲ್ಲಿ, ಸಾಮಾನ್ಯವಾಗಿ, ನಾಲ್ಕು ಪ್ರಮುಖ ವಿಷಯಗಳಾಗಿರುತ್ತವೆ ಎನ್ನಲಾಗಿದೆ.

    ಇದನ್ನೂ ಓದಿ: ದೀದಿ, ನೀವಿಲ್ಲದೆ ಬದುಕಲಾರೆ : ಮಾಜಿ ಟಿಎಂಸಿ ನಾಯಕಿ

    ಸಿಬಿಎಸ್​ಇ ನೀಡಿರುವ ಮೊದಲನೇ ಪ್ರಸ್ತಾವನೆಯಲ್ಲಿ, ಹಾಲಿ ಇರುವ ವ್ಯವಸ್ಥೆಯಲ್ಲೇ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಮೇಜರ್ ವಿಷಯಗಳಿಗೆ ಪರೀಕ್ಷೆ ನಡೆಸುವುದಾಗಿ ಚಿಂತಿಸಿದ್ದು, ಒಟ್ಟು 3 ತಿಂಗಳ ಅವಧಿಯಲ್ಲಿ ಪರೀಕ್ಷಾ ಪ್ರಕ್ರಿಯೆ ನಡೆಸುವ ಬಗ್ಗೆ ಹೇಳಲಾಗಿದೆ. ಎರಡನೇ ಪ್ರಸ್ತಾವನೆಯಲ್ಲಿ, ವಿದ್ಯಾರ್ಥಿಗಳು ತಂತಮ್ಮ ವಿದ್ಯಾ ಸಂಸ್ಥೆಗಳಲ್ಲೇ ಪರೀಕ್ಷೆ ಬರೆಯುವ ಬಗ್ಗೆ ಹೇಳಿದ್ದು, 45 ದಿನಗಳಲ್ಲಿ ಪರೀಕ್ಷೆಗಳನ್ನು ಮುಗಿಸುವ ಯೋಜನೆ ಇದೆ. ಪರೀಕ್ಷೆಯ ಅವಧಿಯನ್ನು ಒಂದೂವರೆ ಗಂಟೆಗೆ ಇಳಿಸಿ, ಆಬ್ಜೆಕ್ಟೀವ್ ಮತ್ತು ಶಾರ್ಟ್​ ಆನ್ಸರ್​ ಟೈಪ್ ಪ್ರಶ್ನೆಗಳನ್ನು ಮಾತ್ರ ನೀಡಿ 3 ಮೇಜರ್ ಸಬ್ಜೆಕ್ಟ್​ ಮತ್ತು 1 ಲ್ಯಾಂಗ್ವೇಜ್​ ಪರೀಕ್ಷೆಗಳನ್ನು ಬರೆಸುವ ಸಲಹೆ ಇದೆ ಎನ್ನಲಾಗಿದೆ.

    ನಾಳೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರ ಅಧ್ಯಕ್ಷತೆಯಲ್ಲಿ, ಶಿಕ್ಷಣ ಮಂತ್ರಿ ರಮೇಶ್ ಪೋಖ್ರಿಯಾಲ್ ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಈ ಎರಡೂ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ. ಯಾವುದೇ ಸಂದರ್ಭದಲ್ಲಿ, ಕರೊನಾದಿಂದಾಗಿ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ, ಮತ್ತೆ ಪರೀಕ್ಷೆಗೆ ಕೂರುವ ಅವಕಾಶ ಕಲ್ಪಿಸುವ ಬಗ್ಗೆ ಸಿಬಿಎಸ್​ಇ ಚಿಂತಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

    ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು

    ರೇಷನ್​ ನಿರಾಕರಿಸಿದರೆ 1967 ಸಹಾಯವಾಣಿಗೆ ದೂರು ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts