More

    ಐಎಂಎ ವಂಚನೆ ಪ್ರಕರಣ; ಸಿಬಿಐ ಅಧಿಕಾರಿಗಳಿಂದ 28 ಮಂದಿ ವಿರುದ್ಧ ಪೂರಕ ಚಾರ್ಜ್​​ಶೀಟ್​…

    ನವದೆಹಲಿ: ಐಎಂಎ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ತನಿಖೆಗಿಳಿದಿರುವ ಸಿಬಿಐ ಅಧಿಕಾರಿಗಳು ಮತ್ತಷ್ಟು ಚುರುಕು ಮುಟ್ಟಿಸಿದ್ದು, 28 ಮಂದಿ ವಿರುದ್ಧ ಪೂರಕ ಚಾರ್ಜ್​​ಶೀಟ್​ ದಾಖಲಿಸಿದ್ದಾರೆ.

    ಸುಮಾರು 4 ಸಾವಿರ ಕೋಟಿ ರೂಪಾಯಿನ ಈ ಹಗರಣ ಸಂಬಂಧ ಕಂಪನಿಯ ಎಂಡಿ ಹಾಗೂ ಸಿಇಒ ಮೊಹಮದ್​ ಮನ್ಸೂರ್ ಖಾನ್​ ಸೇರಿ ಅನೇಕ ಹಿರಿಯ ಅಧಿಕಾರಿಗಳೂ ಆರೋಪಿಗಳಾಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಂಬಂಧಿತ ನ್ಯಾಯಾಲಯದಲ್ಲಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

    ಐಜಿಪಿ ಹೇಮಂತ್ ನಿಂಬಾಳ್ಕರ್​, ಎಸ್​ಪಿ ಅಜಯ್​ ಹಿಲೊರಿ, ಡಿವೈಎಸ್​ಪಿ ಇ.ಬಿ. ಶ್ರೀಧರ, ಇನ್​ಸ್ಪೆಕ್ಟರ್ ಎಂ. ರಮೇಶ್​, ಎಸ್​ಐ ಪಿ.ಗೌರಿಶಂಕರ್​ ಹಾಗೂ ಆಗ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಎಲ್​.ಸಿ.ನಾಗರಾಜ್​ ಅವರ ಹೆಸರನ್ನು ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಐಎಂಎ ಕಂಪನಿಯ ನಿರ್ದೇಶಕರಾದ ನಿಜಾಮುದ್ದೀನ್​, ನಸೀರ್ ಹುಸೇನ್​, ನವೀದ್​ ಅಹಮದ್ ನಟ್ಟಂಕರ್, ವಸೀಂ, ಅರ್ಷದ್​ ಖಾನ್​ ಹಾಗೂ ಅಫ್ಸರ್​ ಪಾಷಾ ಅವರ ಹೆಸರುಗಳೂ ಜಾರ್ಜ್​ಶೀಟ್​ನಲ್ಲಿವೆ ಎನ್ನಲಾಗಿದೆ. ​ಐಎಂಎ ಪ್ರಕರಣ 2018ರಲ್ಲಿ ಬೆಳಕಿಗೆ ಬಂದಿತ್ತು, ಬಳಿಕ ಮನ್ಸೂರ್ ಅಲಿಖಾನ್​ ಬಂಧನ ಕೂಡ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts