More

    ಜಾನುವಾರು ಸಂತೆ ಪುನರಾರಂಭಿಸಲು ಒತ್ತಾಯ

    ಬೈಲಹೊಂಗಲ: ಪಟ್ಟಣದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರು ಪೇಟೆಯಲ್ಲಿ ಜಾನುವಾರು ಸಂತೆ ಪುನರಾರಂಭಿಸಬೇಕೆಂದು ಒತ್ತಾಯಿಸಿ ರೈತರು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ರೈತರು ಜಾನುವಾರು ಸಂತೆ ನಿಷೇಧ ಮಾಡಿರುವುದರಿಂದ ರೈತರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ ಎಂದರು.

    ರೈತ ಮುಖಂಡರಾದ ಮಡಿವಾಳಪ್ಪ ಹೋಟಿ ಮಾತನಾಡಿ, ಪಕ್ಕದ ಮಹಾರಾಷ್ಟ್ರದಲ್ಲಿ ಜಾನುವಾರು ಸಂತೆ ನಡೆಸಲಾಗುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ನಿಷೇಧಿಸಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ರೈತರ ಮನವಿಗೆ ಸ್ಪಂದಿಸಿ ಜಾನುವಾರು ಸಂತೆ ಪುನಾರಂಭಿಸಬೇಕು. ಸಂತೆ ಸಂದರ್ಭದಲ್ಲಿ ಪಶು ವೈದ್ಯರನ್ನು ನೇಮಿಸಬೇಕು. ಪಂಪ್‌ಸೆಟ್‌ಗಳಿಗೆ ಸಮಪರ್ಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

    ರೈತ ಮುಖಂಡರಾದ ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಕಮತ ಶೇಖಪ್ಪ ಜತ್ತಿ, ಮಹಾಂತೇಶ ತುರಮರಿ, ಬಸವರಾಜ ಮೊಖಾಶಿ, ಮುರಗೇಶ ಗುಂಡ್ಲೂರ, ಬೀರಪ್ಪ ದೇಶನೂರ, ಅಶೋಕ ಮತ್ತಿಕೊಪ್ಪ, ಸೋಮನಾಥ ಸೊಪ್ಪಿಮಠ, ಬಿ.ಬಿ.ಗಣಾಚಾರಿ, ವಿರೂಪಾಕ್ಷ ಕೋರಿಮಠ, ವಿಠ್ಠಲ ಹಂಪಿಹೊಳಿ, ಬಸವರಾಜ ಶಿಂತ್ರಿ, ಮಡಿವಾಳಪ್ಪ ಬುಳ್ಳಿ, ಸುರೇಶ ವಾಲಿ, ವಿಜಯ ಪೂಜೇರಿ, ಮಹಾದೇವ ಕೋಲಕಾರ, ದೀಪಕ ಚುಳಕಿ, ಚನ್ನಪ್ಪ ಗಣಾಚಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts