More

    ಜಾನುವಾರು ಜಾತ್ರೆ, ಕೃಷಿಮೇಳಕ್ಕೆ ಭರ್ಜರಿ ಸಿದ್ಧತೆ

    ಬೈಲಹೊಂಗಲ: ಪಟ್ಟಣದ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಡಿ.6ರಿಂದ 8ರ ವರೆಗೆ ಜರುಗಲಿರುವ ಬೃಹತ್ ಕೃಷಿಮೇಳ ಹಾಗೂ ಭಾರಿ ಜಾನುವಾರು ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದೆ.

    ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದ ಅವರಣದಲ್ಲಿ ಸುಮಾರು 50 ಎಕರೆ ಜಾಗದಲ್ಲಿ ಈಗಾಗಲೇ ಸಿದ್ಧತೆ ನಡೆದಿದ್ದು, ಮುಖ್ಯ ಪ್ರಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಸುಮಾರು 150ಕ್ಕೂ ಹೆಚ್ಚು ಮಳಿಗೆಗಳು ನಿರ್ಮಾಣಗೊಂಡಿವೆ. ಕೃಷಿ ಮೇಳ ಹಾಗೂ ಜಾನುವಾರು ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಮಿಟಿ ಮುಖಂಡರು ಹಗಲಿರುಳು ಶ್ರಮಿಸುತ್ತಿದ್ದಾರೆ. ಜಾನುವಾರು ಪ್ರದರ್ಶನಕ್ಕೆ ಆಕರ್ಷಕ ಬಹುಮಾನ ಘೋಷಿಸಲಾಗಿದೆ.

    ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ನಿವೃತ್ತ ವಿಶ್ರಾಂತ ಕುಲಪತಿ ಡಾ.ಶಿವಾನಂದ ಹೊಸಮನಿ ಕೃಷಿ ಮೇಳದ ಸಿದ್ಧತೆ ಪರೀಶಿಲಿಸಿ ಮಾತನಾಡಿ, ಮೇಳದಲ್ಲಿ ಯುವ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವತಿಯಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

    ಸಮಿತಿ ಮುಖಂಡರಾದ ಶಿವರಂಜನ ಬೋಳನ್ನವರ, ಮಹೇಶ ಬೆಲ್ಲದ, ಸಿ.ಆರ್.ಪಾಟೀಲ, ಮಹಾಂತೇಶ ತುರಮರಿ, ಬಿ.ಬಿ. ಗಣಾಚಾರಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಈ ಬೃಹತ್ ಕೃಷಿ ಮೇಳ, ಭಾರಿ ಜಾನುವಾರು ಜಾತ್ರೆ ಆಯೋಜಿಸಲಾಗಿದ್ದು, ಸುತ್ತಮುತ್ತಲಿನ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದರು.

    ಸಹಾಯಕ ಕೃಷಿ ಅಧಿಕಾರಿ ಬಸವರಾಜ ದಳವಾಯಿ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ, ಸುನೀಲ ಗೋಡಬೊಲೆ, ಬಸವರಾಜ ಭರಮನ್ನವರ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಹೋಟಿ, ಬಸವರಾಜ ಜನ್ಮಟ್ಟಿ, ಮುರಗೇಶ ಗುಂಡ್ಲೂರ, ಶ್ರೀಕಾಂತ ಮಾಳನ್ನವರ, ಸೋಮನಾಥ ಸೊಪ್ಪಿಮಠ, ರಾಜು ಕುಡಸೋಮನ್ನವರ, ಬಾಬುಸಾಬ ಸುತಗಟ್ಟಿ, ಸುಭಾಸ ತುರಮರಿ, ವಿರೂಪಾಕ್ಷ ಕೋರಿಮಠ, ಅಶೋಕ ಮತ್ತಿಕೊಪ್ಪ, ಬಸವರಾಜ ಶಿಂತ್ರಿ, ಜಗದೀಶ ಜಂಬಗಿ, ರವಿ ತುರಮರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts