ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಚಿನ್​ ಪುತ್ರ: ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ; ಮದುವೆ ವಿಡಿಯೋ ವೈರಲ್! Arjun Tendulkar

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್​-ಸಾನಿಯಾ ಜೋಡಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್​-ಸಾನಿಯಾ ಜೋಡಿ
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ದೇವರ ಮನೆಯಲ್ಲಿ ಮದುವೆ ಸಂಭ್ರಮ
  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್​ ಸಾನಿಯಾ ಜೋಡಿ
  • ಮದುವೆಗೆ ಹರಿದುಬಂದ ಕ್ರಿಕೆಟ್​-ಬಾಲಿವುಡ್​ ತಾರೆಗಳು
ಮುಂಬೈ: ಕ್ರಿಕೆಟ್ ದೇವರೆಂದೆ ಜನ ಮಾಸನದಲ್ಲಿ ಖ್ಯಾತರಾಗಿರುವ ಸಚಿನ್​ ತೆಂಡೂಲ್ಕರ್ ಪುತ್ರ ಅರ್ಜುನ್​ ತೆಂಡೂಲ್ಕರ್ (Arjun Tendulkar) ಮತ್ತು ಉದ್ಯಮಿ ಸಾನಿಯಾ ಚಾಂದೋಕ್ ಅವರ ವಿವಾಹವು ಗುರುವಾರ (ಮಾ.5) ಮುಂಬೈನಲ್ಲಿ ನೆರವೇರಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆಯ ವಿಡಿಯೋಗಳು ಭಾರಿ ಸದ್ದು ಮಾಡುತ್ತಿವೆ.
ವೈರಲ್​ ವಿಡಿಯೋನಲ್ಲಿ ಅರ್ಜುನ್​ ತೆಂಡೂಲ್ಕರ್, ಸಾನಿಯಾ ಚಾಂದೋಕ್ ಅವರಿಗೆ ವರಮಾಲೆಯನ್ನು ಹಾಕಿ, ಪರಸ್ಪರ ತಬ್ಬಿಕೊಳ್ಳುವುದನ್ನು ನೋಡಬಹುದಾಗಿದ್ದು, ಮಗನ ಹಿಂದೆ ಸಚಿನ್​ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಮತ್ತು ಅಕ್ಕ ಸಾರಾ ತೆಂಡೂಲ್ಕರ್ ಸಂತೋಷದಿಂದ ಇರುವುದನ್ನು ಕಾಣಬಹುದು.
ಕಳೆದ ವರ್ಷ ಅಗಸ್ಟ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಅಧಿಕೃತವಾಗಿ ದಂಪತಿಗಳಾಗಿ ಬದಲಾಗಿದ್ದಾರೆ. ಅರ್ಜುನ್​ ತೆಂಡೂಲ್ಕರ್ ಒಬ್ಬ ಕ್ರಿಕೆಟ್​ ಆಟಗಾರನಾಗಿದ್ದು, ಈ ವರ್ಷದ (2026) ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಇತ್ತ ಸಾನಿಯಾ ಚಾಂದೋಕ್​, ಮುಂಬೈನ ಪ್ರತಿಷ್ಟಿತ ಉದ್ಯಮಿ ರವಿ ಘಾಯಿ ಅವರ ಮೊಮ್ಮಗಳಾಗಿದ್ದು, ಚಾಂದೋಕ್​ ಮತ್ತು ತೆಂಡೂಲ್ಕರ್ ಕುಟುಂಬ ಬಹುಕಾಲದ ಗೆಳೆಯರೆಂದು ತಿಳಿದು ಬಂದಿದೆ.

ಮದುವೆಯಲ್ಲಿ ಕ್ರಿಕೆಟಿಗರ ಸಂಗಮ

ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್ ಅವರ ಮಗನ ಮದುವೆಗೆ ಭಾರತೀಯ ಕ್ರಿಕೆಟ್​ ತಂಡದ ದಂಡೇ ಆಗಮಿಸಿದೆ ಎಂದರೆ ತಪ್ಪಾಗದು. ಸದ್ಯ ಟಿ-ಟ್ವೆಂಟಿ ವರ್ಲ್ಡ್​ಕಪ್​ನಲ್ಲಿ ಬ್ಯುಸಿಯಾಗಿರುವ ಆಟಗಾರರನ್ನು ಹೊರತು ಪಡಿಸಿ ಉಳಿದ ಬಹುತೇಕ ಆಟಗಾರರು ಅರ್ಜುನ್​- ಸಾನಿಯಾ ಮದುವೆಯಲ್ಲಿ ಹಾಜರಿದ್ದರು.
ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಪತ್ನಿ ಸಾಕ್ಷಿ, ಭಾರತ ತಂಡದ ಖ್ಯಾತ ಮಾಜಿ ಆಟಗಾರರಾದ ರಾಹುಲ್​ ದ್ರಾವಿಡ್​, ಅನಿಲ್​ ಕುಂಬ್ಳೆ, ಯುವರಾಜ್​ ಸಿಂಗ್​, ಇರ್ಫಾನ್​ ಪಠಾಣ್​ ಹಾಜರಿದ್ದರು. ಪ್ರಸ್ತುತ ಐಸಿಸಿ ಮುಖ್ಯಸ್ಥ ಜಯ್​ ಶಾ ಕೂಡ ಮದುವೆಗೆ ಆಗಮಿಸಿ ವಧು-ವರರಿಗೆ ಶುಭಕೋರಿದ್ದಾರೆ. ಕರ್ನಾಟಕ ಕ್ರಿಕೆಟ್​ ಅಸೋಸಿಯೇಶನ್​ನ ನೂತನ ಅಧ್ಯಕ್ಷ ವೆಂಕಟೇಶ್​ ಪ್ರಸಾದ ಕೂಡ ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಮದುವೆಗೆ ಎಂಟ್ರಿ ಕೊಟ್ಟ ಬಾಲಿವುಡ್​ ತಾರೆಗಳು

ಕ್ರಿಕೆಟ್​ ಮತ್ತು ಬಾಲಿವುಡ್​ಗೆ ಅವಿನಾಭಾವ ಸಂಬಂಧವಿದ್ದು, ಈಗ ಅರ್ಜುನ್​-ಸಾನಿಯಾ ಮದುವೆಗೆ ಬಾಲಿವುಡ್​ನ ತಾರೆಗಳು ಆಗಮಿಸುತ್ತಿದ್ದಾರೆ.ಬಾಲಿವುಡ್​ನ ಖ್ಯಾತನಟ ಬೀಗ್​ ಬಿ ಅಮಿತಾಬ್​ ಬಚ್ಚನ್​ ಪತ್ನಿ ಜಯಾ ಬಚ್ಚನ್​ ಮತ್ತು ಮಗ ಅಭಿಷೇಕ್​ ಬಚ್ಚನ್​ ಹಾಗೂ ಸೊಸೆ ಐಶ್ಚರ್ಯ ರೈ ಬಚ್ಚನ್​ ಜೊತೆ ಆಗಮಿಸಿದ್ದಾರೆ. ಬಾಲಿವುಡ್​ ನಟ ಮತ್ತು ನಿರ್ದೇಶಕ ಫರಾನ್​ ಅಖ್ತರ್​, ನೀಲ್​ ನಿತಿನ್​ ಮುಖೇಶ್​, ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಮೊದಲಾದವರು ಈ ಮದುವೆಗೆ ಬಂದು ನವ ಜೋಡಿಗಳಿಗೆ ಶುಭಕೋರಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net