ಅಂದಿನ ರಾಜರ ಯುಗದಲ್ಲಿ ಬಫೆಟ್ ರೀತಿ ನಾನಾ ರೀತಿ ಆಹಾರವನ್ನು ಉಣ ಬಡಿಸಲಾಗುತ್ತಿತ್ತು. ಅದರಂತೆ, ಇಲ್ಲಿ ರೆಸ್ಟೋರೆಂಟ್ನಂತೆ ಕಾರನ್ನು ವಿನ್ಯಾಸ ಮಾಡಿರಲಾಗುತ್ತದೆ. ಇದನ್ನು ಶೀಶ್ ಮಹಲ್ ಹಾಗೂ ಸ್ವರ್ಣ ಮಹಲ್ ಎನ್ನಲಾಗುತ್ತದೆ. ಇಲ್ಲಿ ಭಾರತದ ಮತ್ತು ವಿದೇಶದ ಆಹಾರವನ್ನು ಆಸ್ವಾದಿಸಬಹುದಾಗಿದೆ. ಇಲ್ಲಿ ಸಿಗುವ ಆಹಾರದ ಮೆನುವಿನಲ್ಲಿ ಜಾಮೂನು, ಐಸ್ಕ್ರೀಂ, ದಾಲ್, ಅನ್ನ, ಕಿಚಡಿ, ಮಖಾನಿ, ಕಂಧಾರಿ, ಪಲಾವ್, ಚಿಕನ್, ಮಟನ್ ಹೀಗೆ ಸಸ್ಯಹಾರಿ ಮತ್ತು ಮಾಂಸಹಾರದ ಸ್ವಾದವನ್ನು ಸ್ವೀಕರಿಸಬಹುದು.