ಎಂಥಾ ವ್ಯಕ್ತಿಯನ್ನು ಪ್ರೀತಿ ಮಾಡ್ಬೇಕು? ಅಭಿಮಾನಿಗಳಿಗೆ ನಟಿ ರಶ್ಮಿಕಾ ಕೊಟ್ಟ ಸಲಹೆ ಹೀಗಿದೆ ನೋಡಿ...Rashmika Mandanna

ಎಂಥಾ ವ್ಯಕ್ತಿಯನ್ನು ಪ್ರೀತಿ ಮಾಡ್ಬೇಕು? ಅಭಿಮಾನಿಗಳಿಗೆ ನಟಿ ರಶ್ಮಿಕಾ ಕೊಟ್ಟ ಸಲಹೆ ಹೀಗಿದೆ ನೋಡಿ...Rashmika Mandanna
ಎಂಥಾ ವ್ಯಕ್ತಿಯನ್ನು ಪ್ರೀತಿ ಮಾಡ್ಬೇಕು? ಅಭಿಮಾನಿಗಳಿಗೆ ನಟಿ ರಶ್ಮಿಕಾ ಕೊಟ್ಟ ಸಲಹೆ ಹೀಗಿದೆ ನೋಡಿ...Rashmika Mandanna
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀತಿಗೆ ಪ್ರಾಮಾಣಿಕ ಪುರಾವೆ ಎಂದರೆ ಅದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ
  • ಧಾಮಿನಿ ಎಂಬುವವರ ಟ್ವೀಟ್​ಗೆ ಭಾವುಕರಾದ ನಟಿ ರಶ್ಮಿಕಾ ಮಂದಣ್ಣ
  • ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಬಿಡುವವರನ್ನು ಪ್ರೀತಿಸಿ ಎಂದು ತಮ್ಮ ಅಭಿಮಾನಿಗಳಿಗೆ ಸಲಹೆ ಕೊಟ್ಟ ರಶ್ಮಿಕಾ
Rashmika Mandanna : ನಾನು ಪ್ರೀತಿ ಬಗ್ಗೆ ಇಷ್ಟನ್ನು ಹೇಳಬಲ್ಲೆ ನಿಮಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಹಾಗೂ ಸ್ವತಂತ್ರವಾಗಿ ಇರುವಂತೆ ನಡೆಸಿಕೊಳ್ಳುವವರನ್ನು ಸಂಗಾತಿ ಅಥವಾ ಪ್ರೀತಿಪಾತ್ರನನ್ನಾಗಿ ಆಯ್ಕೆ ಮಾಡಿಕೊಳ್ಳಿ ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರ ಜೊತೆಗೆ ರಕ್ಷಿತ್​ ಶೆಟ್ಟಿ ಜತೆಗಿನ ಬ್ರೇಕಪ್​ಗೆ ಕಾರಣ ಏನು ಎನ್ನುವುದು ಮತ್ತೆಗೆ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.
ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧ ಮುರಿದು ಬಿದ್ದು ನಾಲ್ಕಕ್ಕೂ ಹೆಚ್ಚು ವರ್ಷ ಕಳೆದರೂ ಸಹ ಕರ್ನಾಟಕದಲ್ಲಿ ರಕ್ಷಿತ್ ಫ್ಯಾನ್ಸ್ ಮಾತ್ರ ರಶ್ಮಿಕಾ ಅವರನ್ನು ಅವಮಾನಿಸುವುದು ಬಿಟ್ಟಿಲ್ಲ. ಅದಲ್ಲದೇ ರಶ್ಮಿಕಾರ ಮದುವೆಯಾದ ನಂತರ ರಕ್ಷಿತ್ ಅವರ ಪ್ರೊಫೈಲ್ ಬದಲಾವಣೆ ಇನ್ನಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ರಶ್ಮಿಕಾ ಅವರ ವಿರುದ್ಧ ಸಾಗರದ ಅಲೆಗಳಂತೆ ಎರಗಿ ಬಂದ ಟ್ರೋಲ್​​ಗಳ ಮಧ್ಯೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಗೀತಗೋವಿಂದಂ ಜೋಡಿಯನ್ನು ಹಾಡಿ ಹೊಗಳಿದ್ದಾರೆ. ಆ ಬಗ್ಗೆ ರಶ್ಮಿಕಾ ಸ್ವತಃ ರೀಟ್ವೀಟ್ ಮಾಡಿ ಭಾವುಕರಾಗಿದ್ದಾರೆ.
ಮಾಜಿ ಪ್ರೇಯಸಿ ದಾಂಪತ್ಯಕ್ಕೆ ಕಾಲಿಟ್ಟ ನಂತರದ ಕೆಲ ದಿನಗಳಲ್ಲಿ ರಕ್ಷಿತ್ ಶೆಟ್ಟಿಯವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರ ಪ್ರೊಫೈಲ್ ಬದಲಿಸಿದ್ದರು. ಅದರಲ್ಲಿ ಅವರ ಹಿಟ್ ಚಿತ್ರ ಚಾರ್ಲಿಯ ಫೋಟೋ ಹಾಕಿಕೊಂಡಿದ್ದರು. ಇದು ಬಾರಿ ಟ್ರೋಲ್ ಆಗಿತ್ತು. ನಾಯಿಗೆ ನಿಯತ್ತಿದೆ ಎಂದು ಸಂದೇಶ ಕೊಡಲು ಹಾಕಿಕೊಂಡಿರಬಹುದು ಎಂದು ಹಲವರು  ಕಾಮೆಂಟ್ ಮಾಡಿದ್ದರು. ಈ ಎಲ್ಲ ಅಪಮಾನಗಳ ಮಧ್ಯೆ ರಶ್ಮಿಕಾ ಅವರ  ಮನಮಿಡಿಯುವಂತಹ ಪೋಸ್ಟ್​ನ್ನು ಧಾಮಿನಿ ಎಂಬುವವರು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿಯೂ ಪ್ರಾಮಾಣಿಕ ಎಂದು ತಿಳಿಯುವುದು ಹೇಗೆ ಗೊತ್ತಾ?

ಪ್ರೀತಿಯು ಪ್ರಾಮಾಣಿಕ ಎಂಬುವುದಕ್ಕೆ ಪುರಾವೆ ಏನೆಂದರೆ ಪ್ರೇಮಿಸಿದವರು ಒಂದಷ್ಟು ಕಾಲ ಕಾದು ಮದುವೆಯಾಗುವುದು. ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು. ಇನ್ನೂ ನನಗೆ ಪ್ರೀತಿಯಲ್ಲಿ ನಂಬಿಕೆ ಇಡುವಂತೆ ಮಾಡಿದ್ದು, ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ. ಹೀಗಾಗಿ ನಾನು ಇದನ್ನು ಬರೆದೆ ಎಂದು ಲಿಂಕ್​ವೊಂದನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಇಬ್ಬರು ಸೆಲಬ್ರೆಟಿಗಳ ಅಧಿಕೃತ ಟ್ವಿಟರ್​ ಅಕೌಂಟ್​​ ಅನ್ನು ಸಹ ಟ್ಯಾಗ್ ಮಾಡಿದ್ದಾರೆ.

ಈ ಬಗ್ಗೆ ರಶ್ಮಿಕಾ ಹೇಳಿದ್ದಿಷ್ಟು

ನಾನು ನನ್ನ ಬಗೆಗೆ ಸುಮಾರು ಸುದ್ದಿ, ಆರ್ಟಿಕಲ್​ಗಳನ್ನು ಓದಿದ್ದೇನೆ. ಆದರೆ, ನೀವು ಬರೆದ ಈ ವಿಚಾರ ಓದುವಾಗ ನಾನು ನಿಜವಾಗಿಯೂ ಭಾವುಕಳಾದೆ. ನಾನು ಇಷ್ಟೊಂದು ಭಾವುಕಳಾಗಿದ್ದು ಇದೇ ಮೊದಲ ಬಾರಿ. ಹೇಳೋದು ಬಹಳಷ್ಟಿದೆ. ಆದರೆ, ಸಣ್ಣದಾಗಿ ಬರೆಯುತ್ತೇನೆ. ನಾನು ನನ್ನದೇ ಸಾಧನೆಯ ಪ್ರತ್ಯೇಕ ಜಾಗವನ್ನು ಕಂಡುಕೊಳ್ಳುತ್ತಿದ್ದೇನೆ. ಅದನ್ನು ಗುರುತಿಸಿಕೊಳ್ಳುವುದಕ್ಕೆ ನಾನು ಆಭಾರಿ. ಮತ್ತೊಂದು ವಿಚಾರ, ನಾನು ಪ್ರೀತಿ ಎಂಬುದರ ಬಗ್ಗೆ ಏನನ್ನು ಹೇಳಲು ಬಯಸುತ್ತೇನೆ ಎಂದರೆ, ನಿಮ್ಮನ್ನು ಸ್ವತಂತ್ರ್ಯವಾಗಿ ಪಯಣಿಸಲು ಬಿಡುವ ಪ್ರೀತಿಯನ್ನು, ಸಂಗಾತಿಯನ್ನು ಹುಡುಕಿಕೊಳ್ಳಿ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಆ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರರನ್ನು ಹುಡುಕಿಕೊಳ್ಳಲು ಸಲಹೆ ನೀಡಿದ್ದಾರೆ.
ಗೀತ ಗೋವಿಂದಂನಂತಹ ಹಿಟ್​ ಚಿತ್ರದ ನಂತರ ಜೊತೆಯಾದ ಈ ಜೋಡಿ ಬಗ್ಗೆ ಒಂದಲ್ಲವೊಂದು ಗುಸುಗುಸು ಕೇಳಿ ಬರುತ್ತಲೇ ಇತ್ತು. ಸದ್ಯ ಆ ಎಲ್ಲ ವಿಚಾರಗಳ ಮಧ್ಯೆ ಇಬ್ಬರು ಫೆಬ್ರವರಿ 26 ಮತ್ತು 27 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಷ್ಟೇ ಅಲ್ಲದೇ, ಅವರು ಮಾರ್ಚ್​ 4ರಂದು ಹೈದರಾಬಾದ್​ನಲ್ಲಿ ಆರಕ್ಷತೆಯನ್ನು ಆಯೋಜಿಸಿದ್ದರು. ಇಲ್ಲಿ ರಶ್ಮಿಕಾ ಮಂದಣ್ಣ ಅವರು ಮೈಸೂರಿನ ಕೆಂಪು ಬಣ್ಣದ ಸೀರೆ, ಕಪ್ಪು ಹಾಗೂ ರೇಶ್ಮೆ ನೂಲು ಮಿಶ್ರಿತ ಸೀರೆ ಧರಿಸಿ ಮಿಂಚಿದ್ರೆ ವಿಜಯ್​ ದೇವರಕೊಂಡ ಅವರು ಬೇಬಿ ಪಿಂಕ್​ ಬಣ್ಣದ ಕುರ್ತಾ ಪೈಜಾಮ ಧರಿಸಿ ಮಿಂಚುತ್ತಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net