ಯಾದಗಿರಿ 46, ದಾವಣಗೆರೆ 13, ಬೆಳಗಾವಿ 12, ರಾಯಚೂರು 4, ಚಿಕ್ಕಮಗಳೂರು 3, ಧಾರವಾಡ 2, ಶಿವಮೊಗ್ಗ 3, ಕೋಲಾರ 1 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಎಪಿಎಂಸಿ, ಬೆಂಗಳೂರಿನ ಪೀಣ್ಯ, ಚಿಕ್ಕಜಾಲ, ಕೆಂಗೇರಿ, ಕೋಲಾರದ ಕೆಜಿಎ್ನಲ್ಲಿ ಎಫ್ಐಆರ್ ದಾಖಲಿಸಿದೆ. ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ದಾಸ್ತನು, ಸಾಗಾಣಿಕೆ,ರಿಫೀಲಿಂಗ್ ಮೇಲೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಅನಧಿಕೃತವಾಗಿ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವುದು ಕಂಡುಬಂದಿದ್ದು, ಈ ವೇಳೆ ಕ್ರಿಮಿನಲ್ ಕೇಸ್‌ಗಳಲ್ಲಿ ಎಫ್ಎಆರ್ ದಾಖಲಿಸಲಾಗುತ್ತಿದೆ.