ದಾಂಪತ್ಯ ಕಲಹ: ಪತ್ನಿಗೆ ವಿಡಿಯೋ ಕರೆ ಮಾಡಿ ಮಗಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ | Suicide

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಚೆನ್ನೈ: ತಮಿಳುನಾಡಿನ ಚೆನ್ನೈನ ಚಿಂತಾದ್ರಿಪೇಟೆಯ ಸರ್ಕಾರಿ ಶಾಲೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ 40 ವರ್ಷದ ನೇಪಾಳಿ ಪ್ರಜೆಯೊಬ್ಬ ಪತ್ನಿಗೆ ವಿಡಿಯೋ ಕರೆ ಮಾಡಿ ತನ್ನ ಒಂಬತ್ತು ವರ್ಷದ ಮಗಳನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಚಿಂತಾದ್ರಿಪೇಟೆ ಪೊಲೀಸರು, ಮೃತರು ಲಕ್ಷ್ಮಣ್ ಪ್ರಸಾದ್(40) ಅವರ ಮಗಳು ಗೀತಾ (9). ಮಗಳು ಅವರೊಂದಿಗೆ ಶಾಲೆಯ ಆವರಣದಲ್ಲಿ ವಾಸಿಸುತ್ತಿದ್ದು, ಅದೇ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.
ಲಕ್ಷ್ಮಣ್ ತನ್ನ ಪತ್ನಿಯ ನಿಷ್ಠೆಯನ್ನು ಪ್ರಶ್ನಿಸಿ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಅವನ ವರ್ತನೆಯನ್ನು ಸಹಿಸಲಾಗದೆ, ಪತ್ನಿ ತಮ್ಮ ಕಿರಿಯ ಮಗಳೊಂದಿಗೆ ನೇಪಾಳಕ್ಕೆ ತೆರಳಿದ್ದಾರೆ. ಸೋಮವಾರ ರಾತ್ರಿ ತನ್ನ ಪತ್ನಿಯೊಂದಿಗೆ ನಡೆಯುತ್ತಿರುವ ಜಗಳದಿಂದ ಕೋಪಗೊಂಡ ಲಕ್ಷ್ಮಣ್, ಗೀತಾಳನ್ನು ಶಾಲಾ ಕಟ್ಟಡದ ಎರಡನೇ ಮಹಡಿಗೆ ಕರೆದೊಯ್ದು ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಶಾಲಾ ಸಹಾಯಕಿಯೊಬ್ಬಳು ತನ್ನ ದಿನನಿತ್ಯದ ಕರ್ತವ್ಯದ ಭಾಗವಾಗಿ ಎರಡನೇ ಮಹಡಿಗೆ ಹೋದಾಗ ತಂದೆ ಮತ್ತು ಮಗಳು ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಅವರು ತಕ್ಷಣ ಶಾಲಾ ಸಿಬ್ಬಂದಿಗೆ ಮಾಹಿತಿ ನೀಡಿದಾಗ ಅವರು ಸ್ಥಳದಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net