ಇಂಟರ್ನೆಟ್ ಅವಶ್ಯಕತೆಯಿಲ್ಲದೇ ಸಂದೇಶ ಕಳಿಸುವ ಬಿಟ್‌ಚಾಟ್ ಅಪ್ಲಿಕೇಶನ್ ನಿಷೇಧಿಸಿದ ಕೇಂದ್ರ ಸರ್ಕಾರ | BitChat app

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಭದ್ರತಾ ಅಪಾಯಗಳನ್ನು ಉಲ್ಲೇಖಿಸಿ ಮೈಕ್ರೋಸಾಫ್ಟ್ ಒಡೆತನದ ಗಿಟ್‌ಹಬ್​ನ ಇಂಟರ್ನೆಟ್ ಅವಶ್ಯಕತೆಯಿಲ್ಲದೇ ಸಂದೇಶ ಕಳಿಸುವ ಬಿಟ್‌ಚಾಟ್(BitChat app) ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಶನಿವಾರ(ಜು. 25) ವರದಿಯಾಗಿದೆ. 
ಬಿಟ್‌ಚಾಟ್ ಅಪ್ಲಿಕೇಶನ್ ಅನ್ನು ದೇಶ ವಿರೋಧಿ ಅಂಶಗಳು, ಭಯೋತ್ಪಾದಕರು, ಸಂಘಟಿತ ಅಪರಾಧ ಗುಂಪುಗಳು ಮತ್ತು ಸೈಬರ್ ಅಪರಾಧಿಗಳು ಕಾನೂನುಬದ್ಧ ಕಣ್ಗಾವಲು ತಪ್ಪಿಸಲು ಬಿಟ್‌ಚಾಟ್ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದೆ. 

ಈ ಹಿನ್ನೆಲೆ ಮೈಕ್ರೋಸಾಫ್ಟ್ ಒಡೆತನದ ಗಿಟ್‌ಹಬ್‌ಗೆ ಬ್ಲೂಟೂತ್ ಆಧಾರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ತೆಗೆದುಹಾಕುವಂತೆ ಸರ್ಕಾರ ನಿರ್ದೇಶಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. 
ಭಾರತ ಸರ್ಕಾರದ ಗೃಹ ಮಂತ್ರಲಯದ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ಅಪ್ಲಿಕೇಶನ್ ಮೊಬೈಲ್ ನೆಟ್‌ವರ್ಕ್‌ಗಳು, ವೈ-ಫೈ (Wi-Fi) ಅಥವಾ ಕೇಂದ್ರೀಕೃತ ಸರ್ವರ್‌ಗಳನ್ನು ಅವಲಂಬಿಸದೆ ಬ್ಲೂಟೂತ್ ಮೆಶ್ ನೆಟ್‌ವರ್ಕ್‌ಗಳ ಮೂಲಕ ವಿಕೇಂದ್ರೀಕೃತ ಪೀರ್-ಟು-ಪೀರ್ ಸಂವಹನವನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು I4C ಗಮನಿಸಿದೆ.
ಈ ಅಪ್ಲಿಕೇಶನ್‌ನ ಆರ್ಕಿಟೆಕ್ಚರ್ ಅಥವಾ ರಚನೆಯು ಕಾನೂನುಬದ್ಧ ತಡೆಹಿಡಿಯುವಿಕೆ, ಮೂಲವನ್ನು ಪತ್ತೆಹಚ್ಚುವುದು ಮತ್ತು ತನಿಖೆಯನ್ನು ಗಮನಾರ್ಹವಾಗಿ ತಡೆಯುತ್ತದೆ. ಕೇಂದ್ರೀಕೃತ ಸೇವಾ ಪೂರೈಕೆದಾರರಿಲ್ಲದಿರುವುದು, ಚಂದಾದಾರರ ಮಾಹಿತಿಯನ್ನು ಪಡೆಯುವ ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net