ಭಾರತದಲ್ಲಿ ಹಲವು ಸಿಹಿ ತಿಂಡಿಯಿದೆ. ಬಾದೂಷ, ರಸಗೂಲ್ಲ, ಚಂಪಾಕಲಿ, ಮಿಲ್ಕ್ ಕೇಕ್, ಜಾಮೂನ್ ಹೀಗೆ ಹಲವು ಹೆಸರಾಂತ ಸ್ವೀಟ್ಗಳಿವೆ ಆದರೆ, ಅನೇಕ ಭಾರತೀಯರು ಸಿಹಿ ತಿಂಡಿಗಳ ರಾಜ ಯಾವುದು ಎಂದು ಚರ್ಚೆ ಮಾಡುವಾಗ ಎಲ್ಲರೂ ಮೈಸೂರು ಪಾಕ್ ಅನ್ನೇ ಉಲ್ಲೇಖಿಸುತ್ತಾರೆ. ಇದಕ್ಕೆ ಇದರ ರಾಜವೈಭವಿ ಹಿನ್ನೆಲೆ. ಶ್ರೀಮಂತ ರುಚಿ, ಬಣ್ಣ, ತುಪ್ಪ ಇರುವುದೇ ಇದಕ್ಕೆ ರಾಷ್ಟ್ರಮಟ್ಟದ ಮನ್ನಣೆ ಸಿಕ್ಕಿರುವುದಕ್ಕೆ ಕಾರಣವಾಗಿದೆ. ಈ ಮೈಸೂರುಪಾಕ್ ನಿಜಕ್ಕೂ ಐಷಾರಾಮಿ ತಿನಿಸು. ಈ ಒಂದು ಸಿಹಿ ತಿನಿಸು ಐಷಾರಾಮಿ, ಪ್ರತಿಷ್ಠೆ ಮತ್ತು ಸಂಭ್ರಮಾಚರಣೆಗಳೊಂದಿಗೆ ಎಷ್ಟು ಗಾಢವಾಗಿ ಬೆಸೆದುಕೊಂಡಿದೆ. ಬಹುಶಃ ಇದಕ್ಕಾಗಿಯೇ ಮೈಸೂರ್ ಪಾಕ್ ಸಿಹಿಗಳ ರಾಜ ಎನ್ನಬಹುದು.