ಆಶಾ ಭೋಸ್ಲೆ ಬದಲಿಗೆ ಲತಾ ಮಂಗೇಶ್ಕರ್ ಫೋಟೋ ಪೋಸ್ಟ್; ನಟಿ ಅಥಿಯಾ ಶೆಟ್ಟಿ ಸುಂದರಿಯಷ್ಟೇ, ತಲೇಲಿ ಮೆದುಳಿಲ್ಲ ಎಂದು ಟ್ರೋಲ್..Athiya Shetty

Athiya Shetty Faces Backlash
Athiya Shetty Faces Backlash
Published on

ಪ್ರಮುಖ ಮುಖ್ಯಾಂಶಗಳು

  • ಆಶಾ ಭೋಸ್ಲೆ ನಿಧನದ ಶೋಕದಲ್ಲಿ ಲತಾ ಮಂಗೇಶ್ಕರ್ ಫೋಟೋ ಹಂಚಿಕೊಂಡ ನಟಿ ಅಥಿಯಾ
  • "ಸೌಂದರ್ಯವಿದೆ ಆದರೆ ಸಾಮಾನ್ಯ ಜ್ಞಾನವಿಲ್ಲ" ಎಂದು ನೆಟ್ಟಿಗರಿಂದ ಟ್ರೋಲ್​ಗೆ ಒಳಗಾದ ನಟಿ
  • ವಿವಾದದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ ಸುನಿಲ್ ಶೆಟ್ಟಿ ಪುತ್ರಿ, ಕೆಎಲ್ ರಾಹುಲ್​ ಪತ್ನಿ ಅಥಿಯಾ.
Athiya Shetty Faces Backlash: "ಫೋಟೋ ಯಾರದ್ದು ಎಂದು ನೋಡುವ ಪರಿಜ್ಞಾನ ಇಲ್ವಾ..ಪೋಸ್ಟ್​ ಮಾಡ್ಬೇಕು ಎನ್ನುವ ನಾಮಕಾವಸ್ತೆಗೆ ಶೋಕಾಚರಣೆ ಮಾಡ್ಬೇಡಿ. ನೀವುಗಳು ಕಷ್ಟಪಟ್ಟು ಈ ಸ್ಥಿತಿಗೆ ಬಂದಿಲ್ಲ. ಹೀಗಾಗಿ ಬುದ್ಧಿ ಇಲ್ಲ" ಎಂದು ಹಿಗ್ಗಾಮುಗ್ಗ ಟ್ರೋಲ್​ಗೆ ಒಳಗಾಗಿದ್ದು, ಕೆಎಲ್​ ರಾಹುಲ್​ರ ಪತ್ನಿ ಮತ್ತು ಬಾಲಿವುಡ್​ ನಟಿ ಅಥಿಯಾ ಶೆಟ್ಟಿ.  ಆಶಾ ಭೋಸ್ಲೆ  ನಿಧನರಾಗಿದ್ದ ಹಿನ್ನೆಲೆ, ಅವರಿಗೆ ಸಂತಾಪ ಸೂಚಿಸುವ ಬದಲಿಗೆ ಲತಾ ಮಂಗೇಶ್ಕರ್​​ರ ಫೋಟೋ ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ಟ್ರೋಲ್​ಗೆ ಕಾರಣ ಏನು?

ಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸುವ ಭರದಲ್ಲಿ ಅಥಿಯಾ ಅವರು ಆಶಾ ಭೋಸ್ಲೆ ಅವರ ಬದಲಿಗೆ ಅವರ ಸೋದರಿ, ಲತಾ ಮಂಗೇಶ್ಕರ್ ಅವರ ಫೋಟೋವನ್ನು ಹಂಚಿಕೊಂಡಿರುವುದೇ ಈ ವಿವಾದಕ್ಕೆ ಕಾರಣವಾಗಿದೆ.

ಆಶಾ ಭೋಸ್ಲೆ ನಿಧನ

ಶನಿವಾರ ತಡರಾತ್ರಿ ಖ್ಯಾತ ಗಾಯಕಿ ಆಶಾ ಭೋಸ್ಲೆ ತುರ್ತು ನಿಗಾ ಘಟಕಕ್ಕೆ ದಾಖಲಾಗಿದ್ದರು.  ಬಹು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರು, ಭಾನುವಾರ(ಏಪ್ರಿಲ್​ 12) ರಂದು ನಿಧನರಾದರು. ಅವರ ಅಗಲಿಕೆಯಿಂದ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸಲು ಅಥಿಯಾ ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ  ಪೋಸ್ಟ್​ ಹಂಚಿಕೊಂಡಿದ್ದಾರೆ.
ಅಲ್ಲೇ ಅವರು ಮಾಡಿದ್ದ ಎಡವಟ್ಟು ಲತಾ ಮಂಗೇಶ್ಕರ್ ಅವರ ಹಳೆಯ ಕಪ್ಪು-ಬಿಳುಪು ಚಿತ್ರವನ್ನು ಹಂಚಿಕೊಂಡು "ಶಾಂತಿ ಸಿಗಲಿ"  ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು, ನಾಯಕಿಯರ ನಡುವಿನ ವ್ಯತ್ಯಾಸ ತಿಳಿಯೋದಿಲ್ವ ಎಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ತಲೇಲಿ ಮೆದುಳಿಲ್ಲ
ಅಥಿಯಾ ಶೆಟ್ಟಿ ನೋಡೋಕಷ್ಟೇ ಸುಂದರಿ, ಆದ್ರೆ ತಲೆಯಲ್ಲಿ ಮೆದುಳಿಲ್ಲ. ಆಶಾ  ಭೋಸ್ಲೆ  ಬದಲಿಗೆ ಲತಾ ಮಂಗೇಶ್ಕರ್​ರ ಫೋಟೋ ಹಂಚಿಕೊಂಡಿದ್ದಾರೆ. ಇವ್ರೆಲ್ಲ ಕಷ್ಟ ಪಟ್ಟು ಬೆಳೆದಿರೋದಿಲ್ಲ. ಹಾಗಾಗಿ ಏನೂ ಗೊತ್ತಾಗೊಲ್ಲ.  ಹೀಗಾಗಿಯೇ ಇವ್ರ ಸಿನಿಮಾಗಳು ಫ್ಲಾಪ್ ಆಗೋದು. ಜೊತೆಗೆ ಇಂತಹ ತಪ್ಪಾಗೋದು ಎಂದು ಎಂದು ಕಿಡಿಕಾರಿದ್ದಾರೆ.
ಕನಿಷ್ಠ ಪಕ್ಷ ಫೋಟೋ ಯಾರದ್ದು ಎಂದು ಪರಿಶೀಲಿಸುವ ಸಾಮಾನ್ಯ ಜ್ಞಾನವೂ ಇಲ್ಲವೇ?. ಶೋಕಾಚರಣೆ ಮಾಡಬೇಕೆಂಬ ಕಾರಣಕ್ಕೆ ಫೋಟೋ ಹಾಕಬೇಡಿ, ಅವರ ಬಗ್ಗೆ ಗೌರವವಿದ್ದರೆ ಕನಿಷ್ಠ ಸರಿಯಾದ ಚಿತ್ರವನ್ನಾದರೂ ಬಳಸಿ" ಎಂದು ಗುಡುಗಿದ್ದಾರೆ.

ನಾಚಿಕೆಗೇಡಿನ ಸಂಗತಿ

ಆಶಾ ಭೋಂಸ್ಲೆಯವರ ನಿಧನದ ಸುದ್ದಿ ತಿಳಿದ ನಂತರ ಸುನಿಲ್ ಶೆಟ್ಟಿಯವರ ಪುತ್ರಿ ಅತಿಯಾ ಶೆಟ್ಟಿ, ಆಶಾ ಭೋಂಸ್ಲೆಯವರ ಬದಲಿಗೆ ಲತಾ ಮಂಗೇಶ್ಕರ್ ಅವರ ಫೋಟೋವನ್ನು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಆರ್​ ಎನ್ನುವ ಎಕ್ಸ್​ ಖಾತೆಯಿಂದ ಟ್ವೀಟ್ ಮಾಡಲಾಗಿದೆ. 
ತಪ್ಪಿನ ಅರಿವಾಗುತ್ತಿದ್ದಂತೆ ಅಥಿಯಾ ಶೆಟ್ಟಿ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೂ, ಅಷ್ಟರಲ್ಲಾಗಲೇ ಅದರ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದು, ಬಾಲಿವುಡ್ ತಾರೆಯರ ಅರೆಬರೆ ಮಾಹಿತಿಯ ಕುರಿತು ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net