ಇನ್ನೂ, ಅಭಿಷೇಕ್ ಶರ್ಮಾ ಕ್ರಿಕೆಟ್ ಪಿಚ್ ಮೇಲೆ ಕುಳಿತು ಜಪ ಮಾಡಿರುವ ಫೋಟೊ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ತಂದೆ ರಾಜಕುಮಾರ್ ಶರ್ಮಾ, ನನ್ನ ಮಗ ದಿನಾಲೂ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಧ್ಯಾನ ಮಾಡುತ್ತಾನೆ. ಇದರಿಂದ ಅವನ ದಿನ ತುಂಬಾ ಚೆನ್ನಾಗಿ ಇರುತ್ತದೆ. ಕ್ರಿಕೆಟ್ ಅವನಿಗೆ ದೇವರಾದರೆ, ಪಿಚ್ ಅವನಿಗೆ ಗುರುದ್ವಾರ ಇದ್ದಂತೆ ಹೀಗಾಗಿ ತನ್ನ ಶತಕದ ಸಂಭ್ರಮವನ್ನು ಅಲ್ಲಿಯೇ ಧ್ಯಾನ ಮಾಡುವ ಮೂಲಕ ಆಚರಿಸಿದ್ದಾನೆ ಎಂದಿದ್ದಾರೆ.