More

    ವಿಶ್ವ ನಂ.1 ಇಗಾ ಸ್ವಿಯಾಟೆಕ್​ಗೆ ಶಾಕ್​ :ನಾಲ್ಕನೇ ಸುತ್ತಿಗೆ ಅಲ್ಕರಾಜ್​, ಮೆಡ್ವೆಡೆವ್​, ಅಜರೆಂಕಾ

    ಮೆಲ್ಬೋರ್ನ್​: ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್​ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಆಸ್ಟ್ರೆಲಿಯನ್​ ಓಪನ್​ ಟೆನಿಸ್​ ಟೂರ್ನಿಯಿಂದ ಹೊರಬಿದ್ದಿದಾರೆ. ಪುರುಷರ ಸಿಂಗಲ್ಸ್​ನಲ್ಲಿ ಎರಡನೇ ಶ್ರೇಯಾಂಕಿತ ಕಾಲೋರ್ಸ್​ ಅಲ್ಕರಾಜ್​, ಜರ್ಮನಿಯ ಅಲೆಕ್ಸಾಂಡರ್​ ಜ್ವೆರೆವ್​, ಡೇನಿಲ್​ ಮೆಡ್ವೆಡೆವ್​ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಅಮೆರಿಕದ ಟಾಮಿ ೌಲ್​, ನಾರ್ವೆಯ ಕ್ಯಾಸ್ಪರ್​ ರುಡ್​, ಬಲ್ಗೇರಿಯಾದ ಗ್ರಿಗರ್​ ಡಿಮಿಟ್ರೋವ್​ 3ನೇ ಸುತ್ತು ದಾಟುವಲ್ಲಿ ವಿಲವಾಗಿದ್ದಾರೆ. ಮಹಿಳೆಯರ ವಿಭಾದಲ್ಲಿ 2 ಬಾರಿ ಚಾಂಪಿಯನ್​ ವಿಕ್ಟೋರಿಯಾ ಅಜರೆಂಕಾ, ಯೂಕ್ರೇನ್​ ಎಲಿನಾ ಸ್ವಿಟೋಲಿನಾ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

    ಮೆಲ್ಬೋರ್ನ್​ ಪಾರ್ಕ್​ನಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ, ಪೋಲೆಂಡ್​ನ ಇಗಾ ಸ್ವಿಯಾಟೆಕ್​ 3-6, 6-3, 6-4 ಸೆಟ್​ಗಳಿಂದ ಜೆಕ್​ ಗಣರಾಜ್ಯದ 19 ವರ್ಷದ ಲಿಂಡಾ ನೋಸ್ಕೋವಾ ಎದುರು ಮುಗ್ಗರಿಸಿದರು. ಇದರೊಂದಿಗೆ 4 ಗ್ರಾಂಡ್​ ಸ್ಲಾಂಗಳ ಒಡತಿ ಸ್ವಿಯಾಟೆಕ್​ ಅವರ 18 ಪಂದ್ಯಗಳ ಗೆಲುವಿನ ಓಟವೂ ಅಂತ್ಯಕಂಡಿದೆ. ಲಿಂಡಾ ನೋಸ್ಕೋವಾ ಇದೇ ಮೊದಲ ಬಾರಿಗೆ ಆಸ್ಟ್ರೆಲಿಯನ್​ ಓಪನ್​ನಲ್ಲಿ ಕಣಕ್ಕಿಳಿದಿದ್ದಾರೆ.

    ಸ್ಪೇನ್​ನ 18 ವರ್ಷದ ಕಾಲೋರ್ಸ್​ ಅಲ್ಕರಾಜ್​ 6-1, 6-1, 1-0 ರಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿ ಚೀನಾದ ಜುನ್​ಚೆಂಗ್​ ಶಾಂಗ್​ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ನಿವೃತ್ತಿಗೊಂಡರು. ಅಲ್ಕರಾಜ್​ ಮುಂದಿನ ಸುತ್ತಿನಲ್ಲಿ ಸೆರ್ಬಿಯಾದ ಮಿಯೋಮಿರ್​ ಕೆಕ್ಮನೋವಿಕ್​ ಸವಾಲು ಎದುರಿಸಲಿದ್ದಾರೆ. ಮಿಯೋಮಿರ್​ ಕೆಕ್ಮನೋವಿಕ್​ ಮೂರನೇ ಸುತ್ತಿನಲ್ಲಿ ಕಳೆದ ವರ್ಷದ ಸೆಮಿೈನಲಿಸ್ಟ್​ ಟಾಮಿ ೌಲ್​ ಅವರನ್ನು 6-4, 3-6,2-6,7-6 (7),6-0 ಸೆಟ್​ಗಳಿಂದ ಮಣಿಸಿದರು.

    ದಿನದ ಇನ್ನೊಂದು ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಹೊರ್ಬಟ್​ ಹರ್ಕೆಜ್​, ್ರಾನ್ಸ್​ನ ಉಗೊ ಹಂರ್ಬಟ್​ 3-6,6-1,7-6,(4),6-3 ಎದುರು ಗೆದ್ದು ಬೀಗಿದರು. ಸತತ 2ನೇ ವರ್ಷ 4ನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ್ರಾನ್ಸ್​ ಅರ್ಥರ್​ ಕಜಾಕ್ಸ್​ ವಿರುದ್ಧ ಸೆಣಸಲಿದ್ದಾರೆ. ಅರ್ಥರ್​ 6-3,6-3, 6&1 ನೇರ ಸೆಟ್​ಗಳಿಂದ ಟ್ಯಾಲೋನ್​ ಗ್ರಿಕ್​ಸ್ಪೋರ್​ ಅವರನ್ನು ಪರಾಭವಗೊಳಿಸಿದರು. ಪೋರ್ಚುಗಲ್​ ನ್ಯೂನೊ ಬೋಗರ್ಸ್​ 6-7,6-4,6-2,7-6 ರಿಂದ 13ನೇ ಶ್ರೇಯಾಂಕಿತ ಗ್ರಿಗೊರ್​ ಡಿಮಿಟ್ರೊವ್​ಗೆ ಆಘಾತ ನೀಡಿದರು.

    ಅಜರೆಂಕಾ, ಸ್ವಿಟೋಲಿನಾ ಮುನ್ನಡೆ
    ಮಾಜಿ ಚಾಂಪಿಯನ್​ ಬೆಲಾರಸ್​ನ ವಿಕ್ಟೋರಿಯಾ ಅಜರೆಂಕಾ 6-1, 7-5 ನೇರ ಸೆಟ್​ಗಳಿಂದ 11ನೇ ಶ್ರೇಯಾಂಕಿತೆ ಜೆಲೆನಾ ಒಸ್ತಾಪೆಂಕೊ ಎದುರು ಜಯ ದಾಖಲಿಸಿದರು. ಇದರೊಂದಿಗೆ ಟೂರ್ನಿಯಲ್ಲಿ 7ನೇ ಬಾರಿಗೆ ಪ್ರಿ ಕ್ವಾರ್ಟರ್​ೈನಲ್​ಗೆ ಲಗ್ಗೆಯಿಟ್ಟರು.
    ಅರ್ಹತಾ ಸುತ್ತಿನ ಆಟಗಾರ್ತಿ ಯೂಕ್ರೇನ್​ನ ಡಯಾನ ಯಾಸ್ಟ್ರೆಮ್ಸಾ$್ಕ 6-2, 2-6,6-1ರಿಂದ 27ನೇ ಶ್ರೇಯಾಂಕಿತೆ ಎಮ್ಮಾ ನವಾರೊ ಅವರನ್ನು ಮಣಿಸಿದರು. 2017ರ ಯುಎಸ್​ ಚಾಂಪಿಯನ್​ ಸ್ಲೋನ್​ ಸ್ಟೀನ್ಸ್​ 6-7,(8), 6-1, 6-4 ಸೆಟ್​ಗಳಿಂದ ಅನ್ನಾ ಕಲಿನ್ಸಾ$್ಕಯಾ ವಿರುದ್ಧ ಸೋತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts