More

    ವೃತ್ತಿಯಲ್ಲಿ ಪರಾಮರ್ಶೆ ಅಗತ್ಯ

    ಗೋಕಾಕ: ಸಮಾಜ ನಿರೀಕ್ಷಿಸುವ ಗತಿಯಲ್ಲಿ ಪ್ರಕರಣಗಳ ಇತ್ಯರ್ಥ ಹಾಗೂ ಪರಿಹಾರ ದೊರಕಿಸಲು ನ್ಯಾಯಾಂಗ ಮತ್ತು ವಕೀಲ ಸಮುದಾಯದಿಂದ ಸಾಧ್ಯವಾಗುತ್ತಿದೆ ಎಂಬುದರ ಪರಾಮರ್ಶೆ ನಡೆಸುವ ಕಾರ್ಯ ಇಂದಿನ ದಿನಗಳಲ್ಲಿ ಅವಶ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಎಂ.ಜೋಶಿ ಹೇಳಿದ್ದಾರೆ.

    ನಗರದ ನ್ಯಾಯಾಲಯದ ಆವರಣದಲ್ಲಿ ಗೋಕಾಕ ವಕೀಲರ ಸಂಘದ ನೂತನ ಪದಾಧಿಕಾರಿಗಳ 2021-2022ನೇ ಸಾಲಿನ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಪದಾಧಿಕಾರಿಗಳು ಇಂಥ ಗಂಭೀರ ವಿಷಯವನ್ನು ಗಮದಲ್ಲಿಟ್ಟುಕೊಂಡು ಸಂಘದ ಸದಸ್ಯರಿಗಾಗಿ ವಿನೂತನ ಬಗೆಯ ಕಾರ್ಯಚಟುವಟಿಕೆ ರೂಪಿಸುವತ್ತ ಗಮನ ಹರಿಸಬೇಕು. ವೃತ್ತಿ ಪರತೆಯನ್ನು ಸದಾ ಮೊಣಚುಗೊಳಿಸುತ್ತ ಹೋದಂತೆ ನಮ್ಮ ಕಾರ್ಯಗಳಲ್ಲಿ ನಾವು ಉನ್ನತ ಸಾಧನೆ ಮಾಡಲು ಸಾಧ್ಯ. ವಕೀಲರು ತಾಂತ್ರಿಕತೆಯಿಂದ ಕೂಡಿರುವ ಇಂದಿನ ನ್ಯಾಯದಾನ ವ್ಯವಸ್ಥೆ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡು ಉನ್ನತ ಹೆಸರು ಗಳಿಸಬೇಕು ಎಂದರು.

    ಸಂಘದ ನಿಕಟಪೂರ್ವ ಅಧ್ಯಕ್ಷ ಯು.ಬಿ.ಶಿಂಪಿ ಅವರು ನೂತನ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಅವರಿಗೆ ಸಂಘದ ಲೆಕ್ಕಪತ್ರಗಳನ್ನೊಂಡ ಖಾತೆ-ವಹಿ ಹಸ್ತಾಂತರಿಸಿದರು. 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಮಾತನಾಡಿದರು.

    ಹಲವಾರು ವರ್ಷಗಳಿಂದ ವಕೀಲರ ಸಂಘದ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಹಿರಿಯ ವಕೀಲ ರವೀಂದ್ರ ಇಟ್ನಾಳ ಅವರನ್ನು ವೇದಿಕೆ ಪರವಾಗಿ ಗೌರವಿಸಲಾಯಿತು. ಹಿರಿಯ ವಕೀಲರ ಸಮಿತಿ ಚೇರ್ಮನ್ ಬಿ.ಆರ್.ಕೊಪ್ಪ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವಿಮಲಾ ಆರ್. ನಂದಗಾವ, ದಿವಾಣಿ ನ್ಯಾಯಾಧೀಶರಾದ ವೀರೇಶಕುಮಾರ ಸಿ.ಕೆ., ಶೋಭಾ ಮತ್ತು ಮೋಹನ ಪೋಳ, ನೂತನ ಉಪಾಧ್ಯಕ್ಷ ಆನಂದ ಪಾಟೀಲ, ಕಾರ್ಯದರ್ಶಿ ಎಸ್.ಎಂ.ಕುದರಿ, ಮಹಿಳಾ ಪ್ರತಿನಿಧಿ ಗೀತಾ ಎಸ್. ಗಂಜಿ ಸೇರಿದಂತೆ ಇತರೆ ಪದಾಧಿಕಾರಿಗಳು ಇದ್ದರು. ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಬಿ.ಟಿ.ಭೀರನಗಡ್ಡಿ ಸ್ವಾಗತಿಸಿದರು. ಹಿರಿಯ ವಕೀಲ ವಿ.ವಿ.ಕುಲಕಣಿ, ಎ.ವಿ.ಹುಲಗಬಾಳಿ, ಎಸ್. ಬಿ.ಗೋರೋಶಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ವೈ.ಕೆ.ಕೌಜಲಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts