More

    ಕುತುಬ್​ ಮಿನಾರ್​ ಗೋಡೆಗೆ ಕಾರು ಡಿಕ್ಕಿ, ಮುಂದೇನಾಯ್ತು?

    ದೆಹಲಿ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ವಿಶ್ವ ಪಾರಂಪರಿಕ ತಾಣ, ರಾಷ್ಟ್ರ ರಾಜಧಾನಿಯ ಐತಿಹಾಸಿಕ ಸಂಕೀರ್ಣ ಕಟ್ಟಡ ಕುತುಬ್​ ಮಿನಾರ್​ನ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದ್ದು, ಸುಮಾರು 50 ಮೀಟರ್​ ದೂರ ಗೋಡೆ ಹಾನಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹತ್ತಿಕೊಂಡ ಕಾರು ಸುಟ್ಟುಕರಕಲಾಗಿದೆ. ಸ್ಥಳದಲ್ಲೇ ಇದ್ದ ಕಾವಲುಗಾರನೊಬ್ಬ ಚಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 4ರ ಬೆಳಗಿನ ಜಾವ 3.45ರಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ಮಹಿಪಾಲ್ಪುರ ನಿವಾಸಿ ಅರುಣ್ ಚೌಹಾಣ್(31) ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ದ್ವಾರಕಾದ ಸೆಕ್ಟರ್-23 ಪ್ರದೇಶದಲ್ಲಿ ಹಳೇ ಕಾರು ಮಾರಾಟ ಮತ್ತು ಖರೀದಿ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ 10ನೇ ತರಗತಿ ಮಕ್ಕಳಿಗೆ ‘ದತ್ತ ಮೇಷ್ಟ್ರು’ ಪಾಠ!

    ಅರುಣ್​ ಚೌಹಾಣ್ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿದ ಕಾರು ಕುತುಬ್​ ಮಿನಾರ್​ ಸಂಕೀರ್ಣ ಕಟ್ಟಡದ ಕಾಂಪೌಂಡ್​ಗೆ ಡಿಕ್ಕಿಯಾಗಿ ಸುಮಾರು ದೂರ ಗೋಡೆಯನ್ನು ಉಜ್ಜಿಕೊಂಡು ಮುಂದೆ ಸಾಗಿದೆ. ಇದಾದ ಕ್ಷಣಾರ್ಧದಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಇದ್ದ ಭಾರತೀಯ ಪುರಾತತ್ವ ಸಮೀಕ್ಷೆ ಸಂಸ್ಥೆಯ ಕಾವಲುಗಾರರೊಬ್ಬರು ಕಾರಿನಿಂದ ಚಾಲಕನನ್ನು ಹೊರಗೆಳೆದು ಪ್ರಾಣ ಉಳಿಸಿದ್ದಾರೆ.

    ಅವಘಡದಲ್ಲಿ ಗಾಯಗೊಂಡ ಆರೋಪಿಯನ್ನು ಪೊಲೀಸ್​ ವಾಹನದಲ್ಲೇ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಮಾರಕ ಕಟ್ಟಡಕ್ಕೆ ಹಾನಿ ಮಾಡಿದ ಆರೋಪದಡಿ ಚೌಹಾಣ್ ವಿರುದ್ಧ ಭಾರತೀಯ ಪುರಾತತ್ವ ಸಮೀಕ್ಷೆಯು ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ ಮುಂಜಾನೆ..ಆತನಿನ್ನೂ ಎದ್ದಿರಲಿಲ್ಲ, ಪತ್ನಿ ಪಕ್ಕದಲ್ಲಿದ್ದಳು; ಗಾರ್ಡನ್​ನಿಂದ ಕೇಳಿದ ಶಬ್ದಕ್ಕೆ ನಗ್ನವಾಗಿಯೇ ಓಡಿ ಹೋದ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts