More

    ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ: ಮಂಜೇಶ್ವರದ ಮೂವರ ದುರ್ಮರಣ

    ಮಂಜೇಶ್ವರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಗುರುವಾರ ನಸುಕಿನ ವೇಳೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಕಾಸರಗೋಡು ಮೂಲದ ಮೂವರು ದುರ್ಮರಣಗೊಂಡ ವಿದ್ರಾವಕ ಘಟನೆ ನಡೆದಿದೆ.

    ಮಂಜೇಶ್ವರ ಹೊಸಂಗಡಿ ಬಳಿಯ ಬೆಜ್ಜ ನಿವಾಸಿ, ಖಾಸಗೀ ಬಸ್ ಚಾಲಕ ಕಿಶನ್ ಬೆಜ್ಜ, ಮಂಜೇಶ್ವರ ಚರ್ಚ್ ಬಳಿಯ ನಿವಾಸಿ ಅಕ್ಷಯ್, ಅಂಗಡಿಪದವು ನಿವಾಸಿ ಮೋನಪ್ಪ ಮೇಸ್ತಿ, ದಾರುಣರಾಗಿ ಮೃತರಾದ ದುರ್ದೈವಿಗಳು.

    ಇವರು ಕೆಲವು ದಿನಗಳ ಹಿಂದೆ ಶಬರಿಮಲೆ ಯಾತ್ರೆ ಪೂರೈಸಿ ಮರಳಿದ್ದರು. ಬಳಿಕ ತಿರುಪತಿ ಕ್ಷೇತ್ರ ದರ್ಶನಕ್ಕೆ ಎರಡು ದಿನಗಳ ಹಿಂದೆ ತೆರಳಿದ್ದು, ಮರಳುತ್ತಿದ್ದಾಗ ಬೆಂಗಳೂರು ಹಾಸನ ಮಧ್ಯೆ ಗುಡೇಮಾರನಹಳ್ಳಿ ಎಂಬಲ್ಲಿ ಅವರು ಸಂಚರಿಸಿದ ಝೈಲೋ ಕಾರು ರಸ್ತೆ ವಿಭಾಜಕ(ಡಿವೈಡರ್) ಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.

    ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡು ಮಹಜರು ನಡೆಸಿದರು. ಮೃತದೇಹವನ್ನು ಊರಿಗೆ ಕರೆತರುವ ಯತ್ನಗಳು ಮುಂದುವರಿದಿದೆ ಎಂದು ತಿಳಿಯಲಾಗಿದೆ.

    ರಾತ್ರಿ ಪ್ರಯಾಣದ ಬಗ್ಗೆ ಮರು ಚಿಂತನೆಯ ಅಗತ್ಯ:
    ವ್ಯಾವಹಾರಿಕ ಜಗತ್ತಿಗೆ ಬದುಕು ತೆರೆದುಕೊಳ್ಳುತ್ತಿರುವಂತೆ ಹಗಲು-ರಾತ್ರಿಗಳು ಬೇಧವಿಲ್ಲದೆ ಸಮವಾಗಿರುವುದು ಇತ್ತೀಚೆಗೆ ಭಾರೀ ಆತಂಕಕ್ಕೂ ಕಾರಣವಾಗುತ್ತಿದೆ. ರಾತ್ರಿ 12ರ ಬಳಿಕ ಮುಂಜಾನೆ 4-4.30ರ ಮಧ್ಯೆ ಬಹಳಷ್ಟು ರಸ್ತೆ ಅಪಘಾತಗಳು ನಿದ್ರೆಯ ಕಾರಣದಿಂದ ಉಂಟಾಗುತ್ತಿರುವುದು ವೇದ್ಯವಾಗುತ್ತಿದ್ದು, ಸರ್ಕಾರಗಳು, ಅಧಿಕಾರಿಗಳು ಇನ್ನಾದರೂ ರಾತ್ರಿ ನಿಶ್ಚಿತ ಸಮಯದ ಪರಿಧಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸುವ ಕಾಲ ಸನ್ನಿಹಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts