More

    VIDEO| ಗಣ ರಾಜ್ಯೋತ್ಸವದ ಪಥ ಸಂಚಲನದಲ್ಲಿ ಪುರುಷರ ತಂಡ ಮುನ್ನಡೆಸಲಿರುವ ಮೊದಲ ಮಹಿಳಾ ಕ್ಯಾಪ್ಟನ್​ ತಾನಿಯಾ ಶೆರಗಿಲ್

    ನವದೆಹಲಿ: ಕ್ಯಾಪ್ಟನ್​ ತಾನಿಯಾ ಶೆರಗಿಲ್​ ಅವರು ಈ ಬಾರಿ ಗಣ ರಾಜ್ಯೋತ್ಸವದ ಪರೇಡ್​ನಲ್ಲಿ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.

    ಸೇನಾ ದಿನಾಚರಣೆಯಲ್ಲಿ ನಡೆದ ಪಥಸಂಚಲನದಲ್ಲಿ ತಾನಿಯಾ ತಮ್ಮ ತಂಡವನ್ನು ಮುನ್ನಡೆಸುತ್ತಿರುವ ವಿಡಿಯೋವನ್ನು ಮಹಿಂದ್ರ ಕಂಪನಿ ಅಧ್ಯಕ್ಷ ಆನಂದ್​ ಮಹಿಂದ್ರ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

    “ಈ ವಿಡಿಯೋ ನನಗೆ ರೋಮಾಂಚನ ಉಂಟುಮಾಡಿತು. ಸ್ಫೂರ್ತಿದಾಯಕ ವಿಡಿಯೋ ನೋಡಿದ ಮೇಲೆ ಇವರು ನಿಜವಾದ ಸೆಲೆಬ್ರಿಟಿ ಎನಿಸಿದೆ. ಈ ವಿಡಿಯೋ ಎಲ್ಲೆಡೆ ಪ್ರಖ್ಯಾತವಾಗಬೇಕು. ಆದರೆ ಟಿಕ್​ಟಾಕ್​ ತರಹದಂತೆ ಅಲ್ಲ” ಎಂದಿದ್ದಾರೆ.

    ಈ ಬಾರಿಯ ಪರೇಡ್​ನಲ್ಲಿ ಕ್ಯಾಪ್ಟನ್​ ಶೆರಗಿಲ್​ ಅವರು ಪ್ರಪ್ರಥಮ ಬಾರಿಗೆ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ. ಪಥ ಸಂಚಲವನ್ನು ಮುನ್ನಡೆಸಲು ಪರೇಡ್​ ಅಡ್ಜಂಟೆಂಟ್ ಮುಖ್ಯರಾಗಿರುತ್ತಾರೆ. ಕ್ಯಾಪ್ಟನ್ ತಾನಿಯಾ ಶೆರಗಿಲ್ ಗಣರಾಜ್ಯೋತ್ಸವದಲ್ಲಿ ಪುರುಷರ ತಂಡವನ್ನು ಮುನ್ನಡೆಸುವ ಮೊದಲ ಮಹಿಳಾ ಪೆರೇಡ್ ಆಗಲಿದ್ದಾರೆ.

    ಎಲೆಕ್ಟ್ರಾನಿಕ್ಸ್​ ಮತ್ತು ಕಮುನಿಕೇಷನ್ಸ್​ನಲ್ಲಿ ಪದವಿ ಪಡೆದಿರುವ ತಾನಿಯಾ, ಚೆನ್ನೈನ ತರಬೇತಿ ಕೇಂದ್ರದಲ್ಲಿ 2017ರಲ್ಲಿ ಬ್ಯಾಚ್​ನವರು. ತಾನಿಯಾ ಅವರ ತಂದೆ, ಅಜ್ಜ ಮತ್ತು ಮುತ್ತಜ್ಜ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts