More

    ಕಾಲುವೆ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಿ

    ರಾಯಬಾಗ: ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯುವುದರಿಂದ ನೀರು ಕೊನೆಯ ಗ್ರಾಮದವರೆಗೆ ತಲುಪಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿರುವ ಎಲ್ಲ ಕಾಲುವೆಗಳನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಶಾಸಕ ಡಿ.ಎಂ. ಐಹೊಳೆ ಹೇಳಿದ್ದಾರೆ.

    ಮಂಗಳವಾರ ತಾಲೂಕಿನ ಮಂಟೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಿಪಂ, ತಾಪಂ, ಗ್ರಾಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡಿದ್ದ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ತಾಪಂ ಇಒ ಪ್ರಕಾಶ ವಡ್ಡರ ಮಾತನಾಡಿದರು. ನಂತರ ಉದ್ಯೋಗ ಖಾತ್ರಿ ಪ್ರಚಾರ ವಾಹಿನಿ ವಾಹನಕ್ಕೆ ಶಾಸಕರು ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಆರ್.ಎ್. ಹಂದಿಗುಂದ, ಕೃಷಿ ಅಧಿಕಾರಿ ಇಂಧುದರ ಹಿರೇಮಠ, ಪಿಡಿಒ ನೂರ್‌ಅಹಮ್ಮದ ಕುಡಚಿ, ಸುದೀಪ ಚೌಗಲಾ, ಯಲಗೌಡ ಪಾಟೀಲ, ಅಪ್ಪಾಸಾಬ ದೇಸಾಯಿ, ಮುತ್ತುರಾಜ ಗದಾಡಿ ಸೇರಿ ತಾಪಂ ಸಿಬ್ಬಂದಿ ಇದ್ದರು.

    ಚಿಕ್ಕೋಡಿ ವರದಿ: ನರೇಗಾ ಯೋಜನೆಯಡಿ ಮಣ್ಣಿನ ಸವಕಳಿ ತಡೆಯುವ ಉದ್ದೇಶದಿಂದ ರೈತರ ಜಮೀನುಗಳಿಗೆ ಬದು ನಿರ್ಮಿಸಿಕೊಡಲಾಗುತ್ತಿದೆ. ರೈತರು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಐ. ರೋಡಗಿ ಹೇಳಿದ್ದಾರೆ.

    ಮಂಗಳವಾರ ಸಮೀಪದ ಉಮರಾಣಿ ಗ್ರಾಪಂ ವ್ಯಾಪ್ತಿಯಲ್ಲಿ ಬದು ನಿರ್ಮಾಣ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿ, ರೈತರ ಜಮೀನುಗಳಲ್ಲಿ ಮಣ್ಣು ಮತ್ತು ಜಲಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಒಂದು ತಿಂಗಳವರೆಗೆ ಗ್ರಾಪಂಗಳಲ್ಲಿ ಬದು ನಿರ್ಮಾಣ ಮಾಸಾಚರಣೆ ಆಯೋಜಿಸಲಾಗಿದೆ ಎಂದರು. ಚಿಕ್ಕೋಡಿ ತಾಪಂ ಇಒ ಕೆ.ಎಸ್. ಪಾಟೀಲ ಮಾತನಾಡಿದರು. ಶಿವಾನಂದ ಶಿರಗಾವಿ, ಎಸ್.ಎಚ್. ಜಾತಗಾರ, ರಮೇಶ ಚಡಚಾಳ, ಐಇಸಿ ಸಂಯೋಜಕ ರಂಜೀತ ಕಾಂಬಳೆ, ಪಿಡಿಒ ಸಂತಪ್ಪ ಕಟ್ಟಿಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts