More

    IPL 2024: ಲಖನೌ ಸೂಪರ್​ಜೈಂಟ್ಸ್​​ಗೆ ಲಕ್​ ತರುವುದೇ ಕನ್ನಡಿಗರ ಶಕ್ತಿ?

    ಲಖನೌ: ಆಡಿರುವ ಮೊದಲೆರಡೂ ಆವೃತ್ತಿಗಳಲ್ಲಿ ಪ್ಲೇಆಫ್​ಗೇರಿದ್ದರೂ, ಫೈನಲ್​ಗೇರಲು ಸಾಧ್ಯವಾಗಿಲ್ಲ. ಕನ್ನಡಿಗ ಕೆಎಲ್​ ರಾಹುಲ್​ ನೇತೃತ್ವದ ತಂಡ ಬಹುತೇಕ ಕಳೆದ ಅವೃತ್ತಿಯ ಪ್ರಮುಖ ಆಟಗಾರರನ್ನೇ ಒಳಗೊಂಡಿದೆ. ಭರ್ಜರಿ ಫಾರ್ಮ್​ನಲ್ಲಿರುವ ಕರ್ನಾಟಕದ ಯುವ ಬ್ಯಾಟರ್​ ದೇವದತ್​ ಪಡಿಕ್ಕಲ್​ ರಾಜಸ್ಥಾನದಿಂದ ವರ್ಗಾವಣೆಗೊಂಡಿರುವುದು ತಂಡದ ಬ್ಯಾಟಿಂಗ್​ ವಿಭಾಗಕ್ಕೆ ಮತ್ತಷ್ಟು ಬಲ ತಂದಿದೆ. ಆಲ್ರೌಂಡರ್​ ಕೆ. ಗೌತಮ್​ ತಂಡದಲ್ಲಿರುವ ಮತ್ತೋರ್ವ ಕನ್ನಡಿಗರಾಗಿದ್ದಾರೆ.

    ಇತ್ತೀಚೆಗೆ ಆಸೀಸ್​ನಲ್ಲಿ ಪದಾರ್ಪಣೆಯ ಟೆಸ್ಟ್​ ಸರಣಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ ವೆಸ್ಟ್​ ಇಂಡೀಸ್​ ಯುವ ವೇಗಿ ಶಮರ್​ ಜೋಸೆಫ್​ ಸೇರ್ಪಡೆ ಮತ್ತೊಂದು ಕುತೂಹಲಕಾರಿ ಅಂಶ. ಸ್ಥಿರ ನಿರ್ವಹಣೆ ತೋರುವಲ್ಲಿ ಯಶಸ್ವಿಯಾದರೆ ತಂಡ 3ನೇ ಪ್ರಯತ್ನದಲ್ಲಿ ಪ್ರಶಸ್ತಿ ಒಲಿಸಿಕೊಳ್ಳುವ ಕನಸು ಕಾಣಬಹುದಾಗಿದೆ.

    ತಂಡ: ಕೆಎಲ್​ ರಾಹುಲ್​ (ನಾಯಕ), ಕ್ವಿಂಟನ್​ ಡಿಕಾಕ್​, ದೇವದತ್​ ಪಡಿಕ್ಕಲ್​, ಆಯುಷ್​ ಬಡೋನಿ, ಕೆ.ಗೌತಮ್​, ದೀಪಕ್​ ಹೂಡಾ, ಕೃನಾಲ್​ ಪಾಂಡ್ಯ, ಪ್ರೇರಕ್​ ಮಂಕಡ್​, ಕೈಲ್​ ಮೇಯರ್ಸ್​, ಅಮಿತ್​ ಮಿಶ್ರಾ, ಮೊಹ್ಸಿನ್​ ಖಾನ್​, ನವೀನ್​ ಉಲ್​ ಹಕ್​, ಕೃನಾಲ್​ ಪಾಂಡ್ಯ, ನಿಕೋಲಸ್​ ಪೂರನ್​, ರವಿ ಬಿಷ್ಣೋಯಿ, ಕರಣ್​ ಶರ್ಮ, ಮಾರ್ಕಸ್​ ಸ್ಟೋಯಿನಿಸ್​, ಸ್ವಪ್ನಿಲ್​ ಸಿಂಗ್​, ಜೈದೇವ್​ ಉನಾದ್ಕತ್​, ಮನನ್​ ವೊಹ್ರಾ, ಶಮರ್​ ಜೋಸೆಫ್​, ಮಯಾಂಕ್​ ಯಾದವ್​, ಯಶ್​ ಠಾಕೂರ್​, ಯಧ್ವೀರ್​ ಸಿಂಗ್​, ಮೊಹ್ಸಿನ್​ ಖಾನ್​, ಶಿವಂ ಮಾವಿ, ಅರ್ಶಿನ್​ ಕುಲಕರ್ಣಿ, ಎಂ. ಸಿದ್ಧಾರ್ಥ್​, ಆಶ್ಟನ್​ ರ್ಟನರ್​, ಡೇವಿಡ್​ ವಿಲ್ಲಿ, ಅರ್ಷದ್​ ಖಾನ್​.

    2ನೇ ಹಂತದ ವೇಳಾಪಟ್ಟಿಗೆ ಕಠಿಣ ಸವಾಲು; ಚುನಾವಣೆಯ ಜತೆಗೆ ಈದ್​-ರಾಮನವಮಿ ಭದ್ರತಾ ತಾಪತ್ರಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts