More

    ಶಿಬಿರ ಸದುಪಯೋಗವಾಗಲಿ

    ಸವದತ್ತಿ: ನನ್ನ ಜನ್ಮದಿನ ನಿಮಿತ್ತ ಸಾರ್ವಜನಿಕರಿಗಾಗಿ ಉಚಿತ ನೇತ್ರ ಶಸ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ ಚಿಕಿತ್ಸಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮನುಷ್ಯ ಇನ್ನೊಬ್ಬರ ಮೇಲೆ ಅವಲಂಬನೆಯಾಗದೆ ಬದುಕಲು ನೇತ್ರ ಪ್ರಮುಖವಾಗಿದೆ. ಆದ್ದರಿಂದ, ಎಲ್ಲರೂ ಉಚಿತ ನೇತ್ರ ಶಸ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.
    ಬೆಂಗಳೂರಿನ ಜನಹಿತ ಐಕೇರ್ ಸೆಂಟರ್ ನುರಿತ ತಜ್ಞ ಡಾ.ಕೃಷ್ಣ ಮೋಹನ ಜಿಂಕಾ ತಂಡ ಮತ್ತು ಸರ್ಕಾರಿ ಆಸ್ಪತ್ರೆಯ ಡಾ.ಎಸ್.ಬಿ.ಹಿತ್ತಲಮನಿ, ಡಾ.ಸಲೀಂ ಕಿತ್ತೂರ ಚಿಕಿತ್ಸೆ ನೀಡಲಿದ್ದಾರೆ. ಸಾರ್ವಜನಿಕರನ್ನು ಕರೆತಂದು ಕಣ್ಣಿನ ತಪಾಸಣೆ ಮಾಡಿಸುವಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಈಗಾಗಲೆ ತಿಳಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶಿಬಿರದ ಕುರಿತು ಜಾಗೃತಿ ಮೂಡಿಸಬೇಕು.

    ಸರ್ಕಾರಿ ಆಸ್ಪತ್ರೆಯ ಮುಖ್ಯದ್ವಾರದ ರಸ್ತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ವಾಹನಗಳ ಸುಸಜ್ಜಿತ ನಿಲುಗಡೆ ಹಾಗೂ ರೋಗಿಗಳಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕ್ರಮವಿರಿಸಬೇಕು. ಊಟ, ಪೆಂಡಾಲ್, ವಸತಿ ಸೇವೆಯನ್ನು ವೈದ್ಯ ಫೌಂಡೇಷನ್‌ನಿಂದ ಮಾಡಲಾಗಿದ್ದು, ಕ್ಷೇತ್ರದ ಜನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

    ವೈದ್ಯಾಧಿಕಾರಿ ಎಂ.ಎನ್.ಮಲ್ಲನಗೌಡರ ಮಾತನಾಡಿ, ದೃಷ್ಟಿಹೀನರ ಪಟ್ಟಿ ಸಿದ್ಧವಿದ್ದು, ನುರಿತ ವೈದ್ಯರಿಂದ ಶಸಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಉಚಿತ ನೇತ್ರ ತಪಾಸಣೆ ಹಾಗೂ ಶಸ ಚಿಕಿತ್ಸೆಯಿಂದ ಸಾವಿರಾರು ಬಡ ಕುಟುಂಬಗಳಿಗೆ ಸಹಾಯವಾಗಲಿದ್ದು, ಎಲ್ಲ ಇಲಾಖೆ ಸಹಕಾರ ಅಗತ್ಯವಿದೆ. ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

    ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್ ಮಾತನಾಡಿ, ಶಿಬಿರದ ಕುರಿತು ಧ್ವನಿವರ್ಧಕ ಮೂಲಕ ಪ್ರತಿ ಗ್ರಾಮಗಳಿಗೆ ಮಾಹಿತಿ ನೀಡಲಾಗುವುದು. ಪುರಸಭೆಯು ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಹಂಚಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಎಂದರು. ತಹಸೀಲ್ದಾರ್ ಎಂ.ಎನ್.ಹೆಗ್ಗಣ್ಣವರ, ಬಿಇಒ ಮೋಹನ ದಂಡಿನ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಎಂ.ಎನ್.ಮಠದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts