More

    ಮಕ್ಕಳ ಕಲಿಕೆಗೆ ಪೋಷಕರು ನೆರವಾಗಿ

    ಚಾಮರಾಜನಗರ: ಮಕ್ಕಳ ಜ್ಞಾನಾರ್ಜನೆ ಹೆಚ್ಚಿಸಲು ಎಜುಕೇಶನ್ ಆ್ಯಪ್ ಸಹಕಾರಿಯಾಗಿದೆ ಎಂದು ಚಾಮರಾಜನಗರ-3 ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ತಿಳಿಸಿದರು.
    ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಮ್ಮಾನ್‌ವೆಲ್ ಕ್ರಿಶ್ಚಿಯನ್ ಪಬ್ಲಿಕ್ ಸ್ಕೂಲ್ ವತಿಯಿಂದ ಎಜುಕೇಶನ್ ಆ್ಯಪ್ ಕುರಿತು ಫೋಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

    ಇಮ್ಮಾನ್ ವೆಲ್ ಕ್ರಿಶ್ಚಯನ್ ಶಿಕ್ಷಣ ಸಂಸ್ಥೆಯು ಪಠ್ಯಪುಸ್ತಕದೊಂದಿಗೆ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕಲಿಸುತ್ತಿರುವುದರಿಂದ ಮಕ್ಕಳಲ್ಲಿ ಹೊಸ ಪದಗಳ ಕಲಿಕೆ, ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪೂರಕವಾಗಿದ್ದು, ಹೆಚ್ಚಿನ ಜ್ಞಾನ ಹೊಂದಲು ಹಾಗೂ ಮಕ್ಕಳ ಕಲಿಕೆಯನ್ನು ಪೋಷಕರು ನೇರವಾಗಿ ಗುರುತಿಸಲು ಸಾಧ್ಯವಾಗಿದೆ. ಇದರಿಂದ ಮಕ್ಕಳು ಹಾಗೂ ಪೋಷಕರಿಗೂ ಸಾಕಷ್ಟು ಅನುಕೂಲವಾಗುತ್ತದೆ ಎಂದರು.

    ಕಾರ್ಯಕ್ರಮವನ್ನು ಎಕ್ಸಿಡ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶಿವೊನಾ, ಶಾಲೆಯ ಮುಖ್ಯಸ್ಥೆ ಜೋಸ್ನಾ ಅಂಥೋಣಿ, ವಕೀಲ ದಲಿತರಾಜ್, ಪ್ರಕಾಶ್, ಸಂಯೋಜಕ ಫಾಸ್ಟರ್‌ಸ್ವಾಮಿ, ಸುರೇಶ್, ಸಿದ್ದರಾಜು ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts