More

    ಗಜಪ್ರಸವವಾದ ಸಂಪುಟ ವಿಸ್ತರಣೆ ಎಂದ ಕಾಂಗ್ರೆಸ್ ಮಾಜಿ ಶಾಸಕ ರಾಜಣ್ಣ

    ತುಮಕೂರು : ಮೂಲ, ವಲಸಿಗ ಕಾಂಗ್ರೆಸ್ ಅಂತ ಹೇಳುವವರು ಮೂರ್ಖರು. ಮುನಿಯಪ್ಪ ಹೇಳಲಿ, ತಿಮ್ಮಪ್ಪ ಹೇಳಲಿ, ಬೊಮ್ಮಪ್ಪ ಹೇಳಲಿ, ಯಾವನೇ ಹೇಳಲಿ. ಸ್ವಾರ್ಥಕ್ಕೋಸ್ಕರ ಆ ಪದ ಬಳಸುತ್ತಾರೆ. ಕೆಲವರನ್ನು ಬಿಟ್ಟು ಬಹುತೇಕ ಎಲ್ಲರೂ ಒಂದಲ್ಲ ಒಂದು ಕಡೆ ಓಡಾಡಿದವರೇ.. ಯಾರೂ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳೇನಲ್ಲ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಆ ಮೂಲಕ ಮಾಜಿ ಸಂಸದ ಕೆ.ಎಚ್.ಮುನಿಯಪ್ಪಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೊರದೇಶದಲ್ಲಿದ್ದು ಅವರು ಬಂದ ತಕ್ಷಣ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಲಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲ ನಾಯಕರು ಅಭಿಪ್ರಾಯಗಳನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

    ಕೆಪಿಸಿಸಿ ಅಧ್ಯಕ್ಷರ ಜತೆ ಕಾರ್ಯಾಧ್ಯಕ್ಷರನ್ನು ಮಾಡುವುದರಲ್ಲಿ ತಪ್ಪೇನಿಲ್ಲ. ಮೊದಲು ಡಿಸಿಎಂ ಸ್ಥಾನವನ್ನೇ ನೀಡುತ್ತಿರಲಿಲ್ಲ. ಈಗ ಒಂದಲ್ಲ, ಎರಡಲ್ಲ, ಐದು ಸ್ಥಾನದವರೆಗೂ ಮಾಡುತ್ತಿದ್ದಾರೆ.

    ಕಾರ್ಯಾಧ್ಯಕ್ಷ ಮಾಡಿದಾಕ್ಷಣಕ್ಕೆ ಏನೂ ಆಗುವುದಿಲ್ಲ. ಅಧ್ಯಕ್ಷರದ್ದೇ ಅಂತಿಮ ತೀರ್ಮಾನವಾಗಿರುತ್ತದೆ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಹಾಗೂ ಪ್ರತಿಪಕ್ಷ ನಾಯಕನನ್ನು ಬೇರೆ ಮಾಡುವ ವಿಚಾರಕ್ಕೆ ನನ್ನ ವಿರೋಧವಿದೆ ಎಂದರು.

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಮತ್ತೆ ಗೆದ್ದು ಬಂದಿದ್ದಾರೆ. ರಾಜೀನಾಮೆ ನೀಡಿದ್ದ ವೇಳೆ ಅವರು ಅನುಭವಿಸಿದ್ದ ಮಾನಸಿಕ ವೇದನೆ ಬೇರೆ ಯಾರಿಗೂ ಬರಬಾರದು. ಆ ಸಂದರ್ಭದಲ್ಲಿ ನಾನು ಕೂಡ ಅವರನ್ನು ಭೇಟಿ ಮಾಡಿದ್ದೆ ಎಂದು ತಿಳಿಸಿದರು. ಉಪ ಚುನಾವಣೆ ನಂತರ ಗೆದ್ದು ಬಂದವರನ್ನು ತಕ್ಷಣ ಮಂತ್ರಿ ಮಾಡದೇ ಇರುವುದು ಬಿಜೆಪಿಗೆ ಒಳ್ಳೆ ಹೆಸರು ತರುವುದಿಲ್ಲ. ಅದರಲ್ಲೂ ಯಡಿಯೂರಪ್ಪಗೆ ಒಳ್ಳೆ ಹೆಸರು ಬರುವುದಿಲ್ಲ ಎಂದರು.

    ಹಲವರ ತ್ಯಾಗ ಅನಿವಾರ್ಯ: ರಾಜ್ಯದ ಸಚಿವ ಸಂಪುಟ ವಿಸ್ತರಣೆ ಇಷ್ಟು ದಿನ ಮುಂದೆ ಹಾಕುವುದರಲ್ಲಿ ಅರ್ಥ ಇರೋಲ್ಲ. ದೇವೇಗೌಡರು, ಕುಮಾರಸ್ವಾಮಿಯನ್ನು ವಚನಭ್ರಷ್ಟರು ಎಂದು ಯಡಿಯೂರಪ್ಪ ಭಾಷಣ ಮಾಡ್ತಾರೆ. ಇವರನ್ನು ಮಂತ್ರಿ ಮಾಡಲಿಲ್ಲಾ ಅಂದ್ರೆ ಆ ಹೆಸರು ಬಿಎಸ್‌ವೈಗೆ ಬರಲಿದೆ ಎಂದು ರಾಜಣ್ಣ ಹೇಳಿದರು. ಇವತ್ತು ಬಿಜೆಪಿ ಸರ್ಕಾರ ಇದೆ ಅಂದ್ರೇ ಈ ಶಾಸಕರಿಂದಲೇ. ಕೆಲ ಸಚಿವರು ಪಕ್ಷಾಂತರಗೊಂಡ ಶಾಸಕರಿಗಾಗಿ ತಮ್ಮ ಸ್ಥಾನವನ್ನೂ ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಯಡಿಯೂರಪ್ಪ ಹಾಗೂ ಹೈಕಮಾಂಡ್ ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳಬೇಕು. ಸಚಿವ ಸಂಪುಟ ವಿಸ್ತರಣೆ ಗಜಪ್ರಸವ ರೀತಿಯಂತಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts