More

    ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ಕನ್ನಡಿಗ ಸುನೀಲ್ ರಮೇಶ್ ಹೊಸ ನಾಯಕ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಕರ್ನಾಟಕದ ಸುನೀಲ್ ರಮೇಶ್, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಡಿಸೆಂಬರ್ 24ರಿಂದ 29 ರವರೆಗೆ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಅಂಧರ ಕ್ರಿಕೆಟ್ ಸರಣಿಗೆ ಭಾರತ ತಂಡದ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ.

    ಬಿ3 ವಿಭಾಗದ ಕನ್ನಡಿಗ ಸುನೀಲ್ ರಮೇಶ್ ಹಾಗೂ ಹರಿಯಾಣದ ದೀಪಕ್ ಮಲಿಕ್ ಎರಡೂ ಸರಣಿಗಳಿಗೆ ಕ್ರಮವಾಗಿ ನಾಯಕ ಹಾಗೂ ಉಪನಾಯಕನಾಗಲಿದ್ದಾರೆ. ಅನುಭವಿ ಆಟಗಾರ ಪ್ರಕಾಶ್ ಜಯರಾಮಯ್ಯ ಉಭಯ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಮತ್ತೋರ್ವ ಆಟಗಾರ. ಕನ್ನಡಿಗರಾದ ಬಸಪ್ಪ ಮತ್ತು ಲೋಕೇಶ್ ಏಕದಿನ ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಡಿ. 24, 25, 26ರಂದು 3 ಟಿ20 ಪಂದ್ಯ ಮತ್ತು ಡಿ. 27, 28, 29ರಂದು 3 ಏಕದಿನ ಪಂದ್ಯಗಳು ನಡೆಯಲಿವೆ.

    ಭಾರತ ಅಂಧರ ಟಿ20 ತಂಡ:
    ಬಿ-1 ವಿಭಾಗ: ಕಲ್ಪೆಶ್ ನಿಂಬಾಡ್ಕರ್ (ಗುಜರಾತ್), ಲಲಿತ್ ಮೀನಾ (ರಾಜಸ್ಥಾನ), ಎ.ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಓಂ ಪ್ರಕಾಶ್ (ಮಧ್ಯಪ್ರದೇಶ), ಪ್ರವೀಣ್ ಕುಮಾರ್ ಶರ್ಮ (ಹರಿಯಾಣ).
    ಬಿ-2 ವಿಭಾಗ: ಡಿ. ವೆಂಕಟೇಶ್ವರ್ ರಾವ್ (ಆಂಧ್ರ ಪ್ರದೇಶ), ಎ ಮನೀಶ್ (ಕೇರಳ), ಇರ್ಫಾನ್ ದಿವಾನ್ (ದೆಹಲಿ), ನಕುಲ್ ಬಂದಾನಾಯಕ (ಒಡಿಶಾ).
    ಬಿ-3 ವಿಭಾಗ: ದೀಪಕ್ ಮಲಿಕ್ (ಉಪನಾಯಕ, ಹರಿಯಾಣ), ಪ್ರಕಾಶ್ ಜಯರಾಮಯ್ಯ (ಕರ್ನಾಟಕ), ಸುನೀಲ್ ರಮೇಶ್ (ನಾಯಕ, ಕರ್ನಾಟಕ), ದುರ್ಗಾ ರಾವ್ (ಆಂಧ್ರ ಪ್ರದೇಶ), ವಿಜಯ್ ಕುಮಾರ್ (ಹಿಮಾಚಲ ಪ್ರದೇಶ).

    ಭಾರತ ಅಂಧರ ಏಕದಿನ ತಂಡ:
    ಬಿ-1 ವಿಭಾಗ: ಕಲ್ಪೆಶ್ ನಿಂಬಾಡ್ಕರ್ (ಗುಜರಾತ್), ಲಲಿತ್ ಮೀನಾ (ರಾಜಸ್ಥಾನ), ಎ.ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಸುಜಿತ್ ಮುಂಡಾ (ಜಾರ್ಖಂಡ್), ಬಸಪ್ಪ (ಕರ್ನಾಟಕ).
    ಬಿ-2 ವಿಭಾಗ: ಡಿ. ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಎ ಮನೀಷ್ (ಕೇರಳ), ಲೋಕೇಶ್ (ಕರ್ನಾಟಕ), ರೋಹಿತ್ ಶರ್ಮ (ಹರಿಯಾಣ).
    ಬಿ-3 ವಿಭಾಗ: ದೀಪಕ್ ಮಲಿಕ್ (ಉಪನಾಯಕ, ಹರಿಯಾಣ), ಪ್ರಕಾಶ್ ಜಯರಾಮಯ್ಯ (ಕರ್ನಾಟಕ), ಸುನೀಲ್ ರಮೇಶ್ (ನಾಯಕ, ಕರ್ನಾಟಕ), ದುರ್ಗಾ ರಾವ್ (ಆಂಧ್ರ ಪ್ರದೇಶ), ವಿಜಯ್ ಕುಮಾರ್ (ಹಿಮಾಚಲ ಪ್ರದೇಶ).

    ದ್ರಾವಿಡ್ ತರಬೇತಿಯಲ್ಲಿ ಅವರದೇ ದಾಖಲೆ ಮುರಿಯುವತ್ತ ವಿರಾಟ್ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts