More

    ಜನವರಿಯಿಂದ ಸಿಎಎ ಪ್ರಕ್ರಿಯೆ ಆರಂಭ ಸಾಧ್ಯತೆ: ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯ

    ನವದೆಹಲಿ: ದೇಶದಲ್ಲಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಿರಾಶ್ರಿತರಿಗೆ 2021ರ ಜನವರಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ನೀಡುವ ಕೆಲಸವನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯ ಅವರು ಶನಿವಾರ ತಿಳಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ಮುಂದಿನ ಜನವರಿಯಿಂದ ಆರಂಭವಾಗುವ ಭರವಸೆ ಇದೆ ಎಂದು ವಿಜಯವರ್ಗಿಯ ಮಾಧ್ಯಮಗಳಿಗೆ ಹೇಳಿದ್ದಾರೆ.

    ನೆರೆಯ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಆಗಮಿಸಿರುವ ನಿರಾಶ್ರಿತರಿಗೆ ಪೌರತ್ವ ನೀಡುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ನಿರಾಶ್ರಿತರಿಗೆ ಪೌರತ್ವ ದೊರೆಯಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯವರ್ಗಿಯ ತಿಳಿಸಿದರು.

    ಇದನ್ನೂ ಓದಿ: ಸಮಾಜವಾದಿ ಆರ್ಥಿಕ ನೀತಿ ಪ್ರತಿಪಾದಕ ಅಂಬೇಡ್ಕರ್; ಇಂದು ಪರಿನಿರ್ವಾಣ ದಿನ

    ವಿಜಯವರ್ಗಿಯ ಹೇಳಿಕೆಗೆ ತಿರುಗೇಟು ನೀಡಿರುವ ಹಿರಿಯ ಟಿಎಂಸಿ ನಾಯಕ ಮತ್ತು ಸಚಿವ ಫಿರ್ಹಾದ್​ ಹಕೀಮ್​, ಪಶ್ಚಿಮ ಬಂಗಾಳದ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

    ಇನ್ನು ಸಿಎಎ ಅಡಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014, ಡಿಸೆಂಬರ್​ 31ಕ್ಕೂ ಮುಂಚೆ ಭಾರತಕ್ಕೆ ಆಗಮಿಸಿರುವ ಸಿಖ್​, ಬೌದ್ಧರು, ಕ್ರಿಶ್ಚಿಯನ್​, ಜೈನರು ಮತ್ತು ಪಾರ್ಸಿಗಳಿಗೆ ಪೌರತ್ವ ನೀಡಲಾಗುವುದು. (ಏಜೆನ್ಸೀಸ್​)

    VIDEO| ಸುರಕ್ಷತಾ ಕ್ರಮ ಬಳಸದೇ ಬರಿಗೈಯಲ್ಲಿ 690 ಅಡಿ ಎತ್ತರದ ಕಟ್ಟಡವೇರಿದ ಸಾಹಸಿಗನಿಗೆ ಬಹುಪರಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts