ಬೈಲಹೊಂಗಲ: ಶಾಸಕ ಮಹಾಂತೇಶ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಅಧಿಕಾರ ನೀಡಿದ ಜನತೆಯ ಪ್ರೀತಿ, ವಿಶ್ವಾಸ, ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆವು. ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಪುರಸಭೆ ನೂತನ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಉಪಾಧ್ಯಕ್ಷೆ ಶಶಿಕಲಾ ಹೊಸಮನಿ ಹೇಳಿದ್ದಾರೆ.
ಪಟ್ಟಣದ ಪುರಸಭೆಯಲ್ಲಿ ಜಂಗಮ ಸಮಾಜ ವತಿಯಿಂದ ಬುಧುವಾರ ಸತ್ಕಾರ ಸ್ವೀಕರಿಸಿ ಮಾತನಾಡಿ, ರಾಜಕೀಯ ಹಿನ್ನೆಲೆಯುಳ್ಳ ನಮ್ಮಿಬ್ಬರ ಮನೆತನಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಜನರ ಕಷ್ಟ, ದುಃಖಗಳಿಗೆ ಸ್ಪಂದಿಸಿ ಕೆಲಸ ಮಾಡಿದ ಅನುಭವವಿದೆ. ಅದನ್ನು ಸದಾಕಾಲ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಜಂಗಮ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಹಿರೇಮಠ, ಶಿಕ್ಷಕ ಫಕೀರಸ್ವಾಮಿಮಠ, ಸೋಮಯ್ಯ ಕಾರಿಮನಿ, ಮಹಾಂತೇಶ ಪೂಜಾರ, ಕುಮಾರ ಮಠಪತಿ, ಉಮೇಶ ರುದ್ರಾಕ್ಷಿಮಠ, ಶಿವಲಿಂಗಯ್ಯ ಉಪ್ಪಿನಮಠ, ಸಂಗಯ್ಯ ಪಾಟೀಲ, ಬಸಲಿಂಗಯ್ಯ ಚಿಕ್ಕಮಠ, ಮಹಾಂತಯ್ಯ ವಿಭೂತಿಮಠ, ಬಸಯ್ಯ ಚಿಕ್ಕಮಠ, ಮಹಾಂತೇಶ ಸಾಲಿಮಠ ಇತರರು ಇದ್ದರು.