More

    ಡಿ.24 ರಂದು ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

    ವಿಜಯವಾಣಿ ಸುದ್ದಿಜಾಲ ಗದಗ
    ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಡಿ.24 ರಂದು ನಗರದ ಮುನ್ಸಿಪಲ್​ ಮೈದಾನದಲ್ಲಿ ನಡೆಯಲಿರುವ ಬೃಹತ್​ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ.24 ರಂದು ಸಂಜೆ 4ಕ್ಕೆ ಪಕ್ಷದ ಕಚೇರಿಗೆ ಆಗಮಿಸುವರು. ತದನಂತರ ಬೈಕ್​ ರ್ಯಾಲಿ ಮೂಲಕ ಸಮಾವೇಶಕ್ಕೆ ಅವರನ್ನು ಕರೆತರಲಾಗುವುದು ಎಂದರು. ಮುಂಬರುವ ಜಿಪಂ, ತಾಪಂ ಹಾಗೂ ಲೋಕ ಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಲು ಕಾರ್ಯಕ್ರಮ ಜರುಗಲಿದೆ ಎಂದರು.

    ಚೈಲ್ಡೀಶ್​ ರಾಹುಲ್​ ಗಾಂಧಿ: ಸಿ.ಸಿ. ಪಾಟೀಲ ಆರೋಪ.
    ಕಾಂಗ್ರೆಸ್​ ಸಂಸದ ಕಲ್ಯಾಣಬ್ಯಾನಜಿರ್ ಅವರು ಉಪರಾಷ್ಟ್ರಪತಿಗಳ ಅಣುಕು ಪ್ರದರ್ಶನ ಮಾಡಿದ್ದನ್ನು ರಾಹುಲ್​ ಗಾಂಧಿ ಚಿತ್ರೀಕರಿಸುತ್ತಾರೆ. ಇದರಿಂದ ರಾಹುಲ್​ ಗಾಂಧಿ ಮಕ್ಕಳ ಮನಸ್ಥಿತಿ ಹೊಂದಿದ್ದಾರೆ ಎಂದು ಸಾಭಿತಾಗುತ್ತಿದೆ. ದೇಶದ ಪರಮೋಚ್ಚ ಸಂವಿಧಾನಿಕ ಹುದ್ದೆಯಲ್ಲಿರುವ ಉಪರಾಷ್ಟ್ರಪತಿಗಳ ಕುರಿತು ಹೇಗೆ ನಡೆದುಕೊಳ್ಳಬೇಕು ಎಂಬುದುನ್ನು ಸಹ ರಾಹುಲ್​ ಗಾಂಧಿ ಅವರಿಗೆ ಅರ್ತವಾಗುವುದಿಲ್ಲ ಎಂಬುದು ಖೇದಕರ ವಿಷಯ. ಅವರಿನ್ನೂ ಚೈಲ್ಡೀಶ್​ ಮನೋಭಾವ ಹೊಂದಿದ್ದಾರೆ ಎಂದು ಆರೋಪಿಸಿದ ಸಿ.ಸಿ. ಪಾಟೀಲ, ಮಲ್ಲಿಕಾರ್ಜುನ ರ್ಖಗೆ ಅವರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದ ಬೆನ್ನಲ್ಲೆ ನೆಹರು ಕುಟುಂಬದ ರಾಜಕೀಯದ ಅಂತ್ಯವನ್ನು ಕಾಂಗ್ರೆಸ್​ ಮಿತ್ರಪಕ್ಷಗಳೇ ಸಾರಿವೆ ಎಂದರು.

    ಇಬ್ಬರು ಶಾಸಕರು:
    ಕಾಂಗ್ರೆಸ್​ ಪರಾಭವ ಗೊಂಡ ಕ್ಷೇತ್ರದಲ್ಲಿ ಇಬ್ಬರು ಶಾಸಕರಿದ್ದಾರೆ. ಚುನಾವಣೆಯಲ್ಲಿ ಗೆದ್ದ ಒಬ್ಬರಾದರೆ, ಪರಾಭವಗೊಂಡ ಕಾಂಗ್ರೆಸ್​ ಅಭ್ಯಥಿರ್ ಕೂಡ ಶಾಸಕರಂತೆ ವತಿರ್ಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಅಧಿಕಾರಿಗಳು ಪರಾಭವಗೊಂಡ ಕಾಂಗ್ರೆಸ್​ ಅಭ್ಯಥಿರ್ ಮನೆ ಮುಂದೆ ಹೋಗಿ ನಿಲ್ಲಬೇಕಾದ ಸ್ಥಿತಿ ಉದ್ಭವಿಸಿದೆಎಂದು ಆರೋಪಿಸಿದರು.

    ಮೊದಲಿನ ಸಿದ್ದರಾಮಯ್ಯರಾಗಿ ಉಳಿದಿಲ್ಲ:
    ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಪಮಾನ ಮಾಡಿದ ವಂಟಮುರಿ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ನಡೆಸಲು ಕಾಂಗ್ರೆಸ್​ ವಿಲವಾಗಿದ್ದು, ಇದು ತಲೆ ತಗ್ಗಿಸುವ ವಿಷಯ. ಆಡಳಿ ಮತ್ತು ಇತರೆ ಎಲ್ಲ ದೃಷ್ಟಿಕೋನದಿಂದಲೂ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದು, ಈ ಮೊದಲಿನ ಸಿದ್ದರಾಮಯ್ಯ ಆಗಿ ಉಳಿದಿಲ್ಲ ಎಂದು ಸಿ.ಸಿ. ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts